ಕಳೆದ ಕೆಲವು ವಾರಗಳಿಂದ ಭಾರತದ ಇಂಧನ ಮಾರುಕಟ್ಟೆಯಲ್ಲಿ ಕೇಳಿಬರುತ್ತಿದ್ದ ಆತಂಕದ ಸುದ್ದಿಗಳಿಗೆ ಈಗ ಕೇಂದ್ರ ಸರ್ಕಾರವು ಅದಕ್ಕೆ ಸರಿಯಾದ ದಾರಿ ತಂದಿದೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲಾ ರೀತಿಯ ತುರ್ತು ಮಾರ್ಗಗಳನ್ನು ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಜುಲೈ 1, 2026 ರಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಹಿಂಪಡೆಯಲಾಗಿದೆ. (Petrol diesel current news Kannada)
ಜೂನ್ ಮಧ್ಯಭಾಗದಲ್ಲಿ ದೇಶದ ತೈಲ ಪೂರೈಕೆಯಲ್ಲಿ ಉಂಟಾಗಿದ್ದ ಘಟನೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಈಗ ಜಾಗತಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಮಾರುಕಟ್ಟೆಯನ್ನು ಮತ್ತೆ ಮುಕ್ತಗೊಳಿಸಲಾಗಿದೆ. ಈ ಇಡೀ ವಿಷಯದ ಹಿನ್ನೆಲೆ ಏನು? ಸರ್ಕಾರ ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿತು? ಇದರಿಂದ ಸಾಮಾನ್ಯ ಗ್ರಾಹಕರಿಗೆ, ರೈತರಿಗೆ ಮತ್ತು ದೇಶದ ಆರ್ಥಿಕತೆಗೆ ಆಗುವ ಲಾಭಗಳೇನು ಎಂಬುದನ್ನು ವಿವರಿಸಲಾಗಿದೆ.
ಇಂಧನ ಮಾರುಕಟ್ಟೆಯಲ್ಲಿ ನಿರ್ಬಂಧ ಹೇರಲು ಕಾರಣವೇನೇನು?
ಯಾವುದೇ ವಿಷಯದ ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದರ ಹಿನ್ನೆಲೆಯನ್ನು ತಿಳಿಯುವುದು ಮುಖ್ಯ. ಕಳೆದ ಜೂನ್ ತಿಂಗಳ ಆರಂಭದಲ್ಲಿ ಪಶ್ಚಿಮ ಏಷ್ಯಾ ಹಠಾತ್ ರಾಜಕೀಯ ಬಿಕ್ಕಟ್ಟು ಮತ್ತು ಯುದ್ಧದಂತಹ ವಾತಾವರಣ ಸೃಷ್ಟಿಯಾಗಿತ್ತು. ಭಾರತಕ್ಕೆ ಕಚ್ಚಾ ತೈಲ ಬರುವ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಆತಂಕ ಎದುರಾಗಿತ್ತು.
ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆಯಲ್ಲಿ ಕೊರತೆ ಉಂಟಾಗಬಹುದು ಎಂಬ ಭೀತಿ ಶುರುವಾಗಿತ್ತು.ಅದೇ ಸಮಯದಲ್ಲಿ ಮತ್ತೊಂದು ಆರ್ಥಿಕ ವ್ಯತ್ಯಾಸವೂ ನಡೆದಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾದಾಗ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆಯನ್ನು ಸ್ಥಿರವಾಗಿಟ್ಟಿತ್ತು.
ಆದರೆ ಕೈಗಾರಿಕೆಗಳು, ದೊಡ್ಡ ಕಾರ್ಖಾನೆಗಳು ಮತ್ತು ದೊಡ್ಡ ಸಾರಿಗೆ ಸಂಸ್ಥೆಗಳು ನೇರವಾಗಿ ತೈಲ ಕಂಪನಿಗಳಿಂದ ಖರೀದಿಸುವುದರಿಂದ ಇಂಧನದ ಬೆಲೆ ಲೀಟರ್‌ಗೆ ₹40 ಕ್ಕಿಂತಲೂ ಹೆಚ್ಚಾಗಿತ್ತು.
ಇದರಿಂದ ಮಾರುಕಟ್ಟೆಯಲ್ಲಿ ಏನಾಯಿತು?
ದೊಡ್ಡ ಕಾರ್ಖಾನೆಗಳು ಖಾಸಗಿ ಬಸ್ ಹೊಡಿಸುವವರು ಮತ್ತು ವಾಣಿಜ್ಯ ಸಂಸ್ಥೆಗಳು ತಮಗೆ ನೇರವಾಗಿ ಬರುವ ದುಬಾರಿ ‘ಬಲ್ಕ್ ಇಂಧನ’ವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಬದಲಿಗೆ ಸಾಮಾನ್ಯ ಜನರು ಪೆಟ್ರೋಲ್-ಡೀಸೆಲ್ ಹಾಕಿಸುವ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಗೆ ತಮ್ಮ ದೊಡ್ಡ ದೊಡ್ಡ ವಾಹನ ಮತ್ತು ಟ್ಯಾಂಕರ್‌ಗಳನ್ನು ತಂದು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತುಂಬಿಸಿಕೊಳ್ಳಲು ಆರಂಭಿಸಿದರು
ಇದರಿಂದ ಸಾಮಾನ್ಯ ಬಂಕ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇಂಧನ ಖಾಲಿಯಾಗಿ ಕೃತಕ ಅಭಾವ ಸೃಷ್ಟಿಯಾಯಿತು. ಇದನ್ನು ತಡೆಯಲು ಜೂನ್ 12 ರಂದು ಸರ್ಕಾರ ಕೆಲವು ತುರ್ತು ನಿಯಂತ್ರಣಗಳನ್ನು ಹೇರಿತ್ತು.
ಜುಲೈ 1 ರಿಂದ ಜಾರಿಗೆ ಬರುವ ಪ್ರಮುಖ ಬದಲಾವಣೆಗಳು

ಈಗ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿದ್ದು ಇಂಧನ ಸಚಿವಾಲಯವು ಎಲ್ಲಾ ನಿರ್ಬಂಧಗಳನ್ನು ಮುಕ್ತಗೊಳಿಸಿದೆ. ಪ್ರಮುಖವಾಗಿ ಎರಡು ದೊಡ್ಡ ಬದಲಾವಣೆಗಳಾಗಿವೆ
ಡೀಸೆಲ್ ಖರೀದಿಯ ಮಿತಿ ರದ್ದು
ಈ ಹಿಂದೆ ಕೃತಕ ಅಭಾವ ತಡೆಯಲು ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿ ವಾಹನಕ್ಕೆ ಅಥವಾ ಗ್ರಾಹಕರಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಮಾತ್ರ ಡೀಸೆಲ್ ನೀಡಬೇಕು ಎಂಬ ನಿಯಮವಿತ್ತು. ಈ ನಿಯಮದಿಂದಾಗಿ ದೊಡ್ಡ ಲಾರಿ ಮತ್ತು ಟ್ರಕ್‌ಗಳಿಗೆ ಭಾರಿ ತೊಂದರೆಯಾಗಿತ್ತು. ಈಗ ಈ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಗ್ರಾಹಕರು ತಮಗೆ ಬೇಕಾದಷ್ಟು ಇಂಧನವನ್ನು ಯಾವುದೇ ನಿಯಮವಿಲ್ಲದೆ ಖರೀದಿಸಬಹುದು.
ಬಲ್ಕ್ ಗ್ರಾಹಕರಿಗೆ ಮುಕ್ತ ಅವಕಾಶ
ಕೈಗಾರಿಕೆಗಳು ಮತ್ತು ದೊಡ್ಡ ವಾಣಿಜ್ಯ ಸಂಸ್ಥೆಗಳು ಚಿಲ್ಲರೆ ಪೆಟ್ರೋಲ್ ಬಂಕ್ಗಳಿಂದ ಇಂಧನ ಖರೀದಿಸುವುದರ ಮೇಲಿದ್ದ ನಿಷೇಧವನ್ನು ಹಿಂಪಡೆಯಲಾಗಿದೆ. ಈಗ ಮಾರುಕಟ್ಟೆಯಲ್ಲಿ ಬೆಲೆಗಳು ಸಮತೋಲನಕ್ಕೆ ಬಂದಿರುವುದರಿಂದ ಯಾರು ಎಲ್ಲಿ ಬೇಕಾದರೂ ಇಂಧನ ಪಡೆಯಬಹುದು.
ನಿರ್ಬಂಧವನ್ನು ಈಗಲೇ ತೆರವುಗೊಳಿಸಲು ಕಾರಣವೇನು?
ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಮುಖವಾಗಿ ಮೂರು ಕಾರಣಗಳಿವೆ:
ಕಚ್ಚಾ ತೈಲ ಬೆಲೆ ಕುಸಿತ:
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಸುಮಾರು ಶೇಕಡಾ 20 ರಷ್ಟು ಕುಸಿದಿವೆ. ಸದ್ಯ ತೈಲ ದರಗಳು ನಿಯಂತ್ರಣದಲ್ಲಿದ್ದು, ಭಾರತಕ್ಕೆ ಕಚ್ಚಾ ತೈಲ ಸರಬರಾಜು ಮಾಡುವ ಗಲ್ಫ್ ರಾಷ್ಟ್ರಗಳ ಸಾಗಣೆ ಮಾರ್ಗಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಹೀಗಾಗಿ ದೇಶದಲ್ಲಿ ತೈಲ ಕೊರತೆಯಾಗುವ ಯಾವುದೇ ಆತಂಕ ಉಳಿದಿಲ್ಲ.
ಬೆಲೆ ವ್ಯತ್ಯಾಸ ಮುಕ್ತಾಯ:
ಕಚ್ಚಾ ತೈಲ ಬೆಲೆ ಇಳಿಕೆಯಾದ ಕಾರಣ, ಈ ಹಿಂದೆ ಇದ್ದ ಬಲ್ಕ್ ಮತ್ತು ರಿಟೇಲ್ ಇಂಧನ ದರಗಳ ನಡುವಿನ ಭಾರಿ ವ್ಯತ್ಯಾಸ ಈಗ ಇಲ್ಲದಂತಾಗಿದೆ. ಎರಡು ದರಗಳು ಬಹುತೇಕ ಸಮಾನವಾಗಿವೆ. ಹೀಗಾಗಿ ದೊಡ್ಡ ಸಂಸ್ಥೆಗಳು ಸಾಮಾನ್ಯ ಬಂಕ್‌ಗಳಿಗೆ ಬಂದು ಮುಗಿಬೀಳುವ ಅಗತ್ಯವೇ ಇಲ್ಲದಂತಾಗಿದೆ.
ಕನ್ನಡದಲ್ಲೇ ಕೋಡಿಂಗ್ ಮತ್ತು ರೋಬೋಟಿಕ್ಸ್: ಸರ್ಕಾರಿ ಶಾಲೆಗಳ ಹೊಸ ಇತಿಹಾಸ
ಭಾರತದ ಬಲವಾದ ತೈಲ ರಾಜತಾಂತ್ರಿಕತೆ:
ಜಾಗತಿಕವಾಗಿ ಬಿಕ್ಕಟ್ಟು ಇದ್ದಾಗಲೂ ಭಾರತವು ರಷ್ಯಾ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಂದ ನಿರಂತರವಾಗಿ ಮತ್ತು ಒಳ್ಳೆಯ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದ ತೈಲ ಸಂಗ್ರಹಾಗಾರಗಳಲ್ಲಿ ಮುಂದಿನ ಹಲವು ವಾರಗಳಿಗೆ ಸಾಕಾಗುವಷ್ಟು ದಾಸ್ತಾನು ಭದ್ರವಾಗಿದೆ.
ವಿವಿಧ ವಲಯಗಳ ಮೇಲಾಗುವ ಧನಾತ್ಮಕ ಪರಿಣಾಮಗಳು

ಈ ನಿರ್ಬಂಧ ತೆರವು ಕೇವಲ ಪೆಟ್ರೋಲ್ ಬಂಕ್‌ಗಳಿಗೆ ಸೀಮಿತವಾಗಿಲ್ಲ. ಇದು ದೇಶದ ವಿವಿಧ ವಲಯಗಳ ಮೇಲೆ ನೇರ ಮತ್ತು ಸಕಾರಾತ್ಮಕ ಪರಿಣಾಮ ಬೀರಲಿದೆ.
ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರಕ್ಕೆ ನಿರಾಳ
ಭಾರತದ ಆರ್ಥಿಕತೆಯ ಚಕ್ರಗಳು ಉರುಳುವುದು ಹೆದ್ದಾರಿಯಲ್ಲಿ ಚಲಿಸುವ ಲಾರಿ ಮತ್ತು ಟ್ರಕ್‌ಗಳಿಂದ. ದೂರದೂರುಗಳಿಗೆ ಸಂಚರಿಸುವ ದೊಡ್ಡ ಟ್ರಕ್‌ಗಳಿಗೆ ಒಂದು ಬಾರಿ ಟ್ಯಾಂಕ್ ಫುಲ್ ಮಾಡಲು 300 ರಿಂದ 400 ಲೀಟರ್ ಡೀಸೆಲ್ ಬೇಕಾಗುತ್ತದೆ. ದಿನಕ್ಕೆ 200 ಲೀಟರ್ ಮಾತ್ರ ಡೀಸೆಲ್ ಸಿಗುತ್ತದೆ ಎಂಬ ಹಳೆಯ ನಿಯಮದಿಂದಾಗಿ ಚಾಲಕರು ಒಂದೇ ದಿನದಲ್ಲಿ ಬೇರೆ ಬೇರೆ ಬಂಕ್‌ಗಳನ್ನು ಹುಡುಕುತ್ತಾ ಅಲೆಯಬೇಕಾಗಿತ್ತು. ಇದರಿಂದ ಸರಕು ಸಾಗಣೆ ತಡವಾಗುತ್ತಿತ್ತು. ಈಗ ಮುಕ್ತ ಖರೀದಿ ಅವಕಾಶ ಸಿಕ್ಕಿರುವುದರಿಂದ ದೇಶದಾದ್ಯಂತ ಸರಕು ಸಾಗಣೆ ಮತ್ತೆ ವೇಗ ಪಡೆದುಕೊಳ್ಳಲಿದೆ.
ರೈತರಿಗೆ ಮತ್ತು ಕೃಷಿ ವಲಯಕ್ಕೆ ದೊಡ್ಡ ಬೆಂಬಲ
ಪ್ರಸ್ತುತ ದೇಶದಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ವಲಯದಲ್ಲಿ ಟ್ರ್ಯಾಕ್ಟರ್‌ಗಳು, ಹಾರ್ವೆಸ್ಟರ್‌ಗಳು ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ಡೀಸೆಲ್ ಬಳಕೆ ಅತ್ಯಂತ ಅಗತ್ಯ. ಇಂತಹ ಸಮಯದಲ್ಲಿ ಇಂಧನದ ಮೇಲಿದ್ದ ಮಿತಿಯನ್ನು ತೆಗೆದುಹಾಕಿರುವುದು ರೈತರಿಗೆ ದೊಡ್ಡ ವರವಾಗಿದೆ.
ರೈತರು ತಮಗೆ ಬೇಕಾದಷ್ಟು ಇಂಧನವನ್ನು ಯಾವುದೇ ತೊಂದರೆಯಿಲ್ಲದೆ ಸಂಗ್ರಹಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು. ಇದು ಈ ಬಾರಿಯ ಕೃಷಿ ಇಳುವರಿಯನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ.
ಹಣದುಬ್ಬರ ಮತ್ತು ಬೆಲೆ ಏರಿಕೆಗೆ ಬ್ರೇಕ್
ಡೀಸೆಲ್ ಕೊರತೆಯಾಗಿದ್ದರೆ ಅಥವಾ ಅದರ ಸಾಗಣೆಗೆ ತೊಂದರೆಯಾಗಿದ್ದರೆ ಮಾರುಕಟ್ಟೆಗೆ ಬರುವ ತರಕಾರಿ ಹಾಲು ಧಾನ್ಯಗಳು ಮತ್ತು ಇತರ ದಿನಬಳಕೆ ವಸ್ತುಗಳ ಸಾಗಣೆ ವೆಚ್ಚ ದುಬಾರಿಯಾಗುತ್ತಿತ್ತು.
ಇದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡುತ್ತಿತ್ತು. ಈಗ ಡೀಸೆಲ್ ಪೂರೈಕೆ ಸುಗಮವಾಗಿರುವುದರಿಂದ ಸಾಗಣೆ ವೆಚ್ಚ ಸ್ಥಿರವಾಗಿರುತ್ತದೆ ಮತ್ತು ಮುಂಬರುವ ಹಬ್ಬದ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ.
ಖಾಸಗಿ ತೈಲ ಕಂಪನಿಗಳಿಗೆ ರಿಲೀಫ್
ಭಾರತದಲ್ಲಿ ಕೇವಲ ಸರ್ಕಾರಿ ಕಂಪನಿಗಳಲ್ಲದೆ ಜಿಯೋ-ಬಿಪಿ ಮತ್ತು ನಯಾರಾ ಎನರ್ಜಿಯಂತಹ ಖಾಸಗಿ ತೈಲ ಕಂಪನಿಗಳೂ ನೂರಾರು ಪೆಟ್ರೋಲ್ ಬಂಕ್‌ಗಳನ್ನು ಹೊಂದಿವೆ. ಬೆಲೆ ವ್ಯತ್ಯಾಸದಿಂದಾಗಿ ಈ ಖಾಸಗಿ ಬಂಕ್‌ಗಳು ಭಾರಿ ನಷ್ಟ ಅನುಭವಿಸುತ್ತಿದ್ದವು ಮತ್ತು ಕೆಲವು ಕಡೆ ಮಾರಾಟವನ್ನೇ ಸ್ಥಗಿತಗೊಳಿಸಿದ್ದವು.
ಈಗ ಮಾರುಕಟ್ಟೆ ಮುಕ್ತವಾಗಿರುವುದರಿಂದ ಖಾಸಗಿ ಬಂಕ್‌ಗಳೂ ಪೂರ್ಣ ಪ್ರಮಾಣದಲ್ಲಿ ಇಂಧನ ಪೂರೈಕೆಯನ್ನು ಆರಂಭಿಸಲಿವೆ. ಇದರಿಂದ ಗ್ರಾಹಕರಿಗೆ ಆಯ್ಕೆಗಳು ಹೆಚ್ಚಾಗುತ್ತವೆ ಮತ್ತು ಬಂಕ್‌ಗಳಲ್ಲಿ ಅನಗತ್ಯ ಕ್ಯೂ ನಿಲ್ಲುವುದು ತಪ್ಪುತ್ತದೆ
ಕಪ್ಪು ಮಾರುಕಟ್ಟೆ ಮತ್ತು ದಾಸ್ತಾನು ದಂದೆಗೆ ಬ್ರೇಕ್

ಯಾವಾಗ ಇಂಧನ ಅಥವಾ ಯಾವುದೇ ಅಗತ್ಯ ವಸ್ತುವಿನ ಸರಬರಾಜಿನ ಮೇಲೆ ಸರ್ಕಾರ ಮಿತಿ ಹೇರುತ್ತದೆಯೋ ಆಗ ಸಮಾಜದಲ್ಲಿ ಕೃತಕ ಅಭಾವ ಸೃಷ್ಟಿಸಿ ಜನರಲ್ಲಿ ಆತಂಕ ಹುಟ್ಟಿಸಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೆಚ್ಚಿನ ಬೆಲೆಗೆ ಕಪ್ಪು ಮಾರುಕಟ್ಟೆಯಲ್ಲಿ ಮಾರುವ ದಂದೆಕೋರರು ಸಕ್ರಿಯರಾಗುತ್ತಾರೆ.
ಕೆಲವು ದಿನಗಳ ಹಿಂದೆ ದೇಶದ ಕೆಲವು ಗ್ರಾಮೀಣ ಭಾಗಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದವು. ಆದರೆ ಸರ್ಕಾರ ಈಗ ಸಂಪೂರ್ಣ ನಿರ್ಬಂಧ ಸಡಿಲಿಸಿ, ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಇಂತಹ ಅಕ್ರಮ ದಂದೆಗಳಿಗೆ ತಡೆ ಬಿದ್ದಂತಾಗಿದೆ.
ಮುಂದಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗುತ್ತಾ?
ಸಾಮಾನ್ಯ ಗ್ರಾಹಕರಲ್ಲಿ ಮೂಡುವ ಒಂದೇ ಅತಿ ದೊಡ್ಡ ಪ್ರಶ್ನೆ ಎಂದರೆ, ನಿರ್ಬಂಧವೇನೋ ಮುಕ್ತವಾಯಿತು ಆದರೆ ಪೆಟ್ರೋಲ್ ಬೆಲೆ ಕಮ್ಮಿಯಾಗುತ್ತಾ? ತಜ್ಞರ ಪ್ರಕಾರ ನಿರ್ಬಂಧ ತೆರವಾಗಿರುವುದು ಮೊದಲ ಸಕಾರಾತ್ಮಕ ಹೆಜ್ಜೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೀಗೆಯೇ ಸ್ಥಿರವಾಗಿ ಮುಂದುವರೆಯುತ್ತದೆಯೋ ಅಥವಾ ಇಳಿಕೆಯಾಗುತ್ತದೆಯೋ ಎಂಬ ಗೊಂದಲ ಸೃಷ್ಟಿಯಾಗಿದೆ
ಆಯಿಲ್ ಕಂಪನಿಗಳ ಲಾಭ
ಸಾರ್ವಜನಿಕ ವಲಯದ ತೈಲ ಕಂಪನಿಗಳ ನಷ್ಟ ಭರ್ತಿಯಾಗಿ ಅವು ಲಾಭದತ್ತ ಮುಖ ಮಾಡುತ್ತವೆ.
ಬೆಲೆ ಕಡಿತದ ಸಾಧ್ಯತೆ
ಕಂಪನಿಗಳು ಆರ್ಥಿಕವಾಗಿ ಸದೃಢವಾದ ತಕ್ಷಣ ಅದರ ಲಾಭವನ್ನು ಜನರಿಗೆ ತಲುಪಿಸಲು ಸರ್ಕಾರ ಸೂಚಿಸಬಹುದು ಇದರಿಂದ ಮುಂಬರುವ ತಿಂಗಳುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ₹3 ರಿಂದ ₹5 ರವರೆಗೆ ಇಳಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಸರ್ಕಾರದ ಈ ಇತ್ತೀಚಿನ ನಿರ್ಧಾರವು ಭಾರತೀಯ ಆರ್ಥಿಕತೆಯು ಜಾಗತಿಕ ಮಟ್ಟದ ಏರಿಳಿತಗಳನ್ನು ಎದುರಿಸಿ ಎಷ್ಟು ಸದೃಢವಾಗಿ ನಿಲ್ಲಬಲ್ಲದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಕೇವಲ ಎರಡು ವಾರಗಳಲ್ಲೇ ಪರಿಸ್ಥಿತಿಯನ್ನು ಅವಲೋಕಿಸಿ, ಮಾರುಕಟ್ಟೆಗೆ ತೊಂದರೆಯಾಗದಂತೆ ಇಂಧನ ನಿಯಂತ್ರಣವನ್ನು ಹಿಂಪಡೆದಿರುವುದು ಸ್ವಾಗತಾರ್ಹ ಕ್ರಮ.ಇದರಿಂದಾಗಿ ಸಾಮಾನ್ಯ ವಾಹನ ಸವಾರರು ರೈತರು ಸಾರಿಗೆ ಉದ್ಯಮಿಗಳು ಹಾಗೂ ಉದ್ಯಮ ವಲಯಕ್ಕೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.
ದೇಶದಲ್ಲಿ ಯಾವುದೇ ಇಂಧನ ಕೊರತೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಮತ್ತು ಎಂದಿನಂತೆ ತಮ್ಮ ದೈನಂದಿನ ವ್ಯವಹಾರಗಳನ್ನು ಸುಗಮವಾಗಿ ನಡೆಸಬಹುದು.
