ಕರ್ನಾಟಕದ ಮಹಿಳೆಯರಿಗೆ ದೊಡ್ಡ ಸುದ್ದಿ: ಗೃಹಲಕ್ಷ್ಮಿ ಯೋಜನೆ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ!

Alt Text: ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ನೀಡುವ ಬ್ಯಾನರ್. ₹2000 ಸಹಾಯಧನ, ಹೊಸ ಅಪ್‌ಡೇಟ್ ಮತ್ತು ಮಹಿಳಾ ಫಲಾನುಭವಿಗಳಿಗೆ ಮಹತ್ವದ ಸೂಚನೆಗಳಿರುವ ಚಿತ್ರ.

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಹಲವು ಹೆಣ್ಣುಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿದೆ. ಪ್ರತಿ ತಿಂಗಳು ಸಿಗುವಂತಹ 2000 ರೂಪಾಯಿ ಹಣ ಕೇವಲ ಸಹಾಯವಲ್ಲ, ಅನೇಕ ಮಹಿಳೆಯರ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆಗೆ ಸಾಕ್ಷಿಯಾಗಿದೆ. ಯೋಜನೆಯಡಿಯಲ್ಲಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ.

ಹಿಂದೆ ಸಣ್ಣ ಸಣ್ಣ ಖರ್ಚುಗಳಿಗೂ ಮನೆಯ ಇತರ ಸದಸ್ಯರ ಮೇಲೆ ಅವಲಂಬಿತರಾಗಿದ್ದ ಅನೇಕ ಮಹಿಳೆಯರು, ಈಗ ತಮ್ಮದೇ ಆದ ಹಣಕಾಸಿನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿದ್ದಾರೆ. ದಿನಸಿ ಸಾಮಗ್ರಿಗಳ ಖರೀದಿ, ಮಕ್ಕಳ ಶಾಲಾ ವೆಚ್ಚ, ಔಷಧಿ ಖರ್ಚು ಮತ್ತು ತುರ್ತು ಅಗತ್ಯಗಳನ್ನು ಈ ಹಣದಿಂದಲೇ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ತಿಂಗಳಿಗೆ 2000 ನೆರವು ಮುಂದುವರಿಕೆ?

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ನಿರಂತರವಾಗಿ ಮುಂದುವರಿಸಿದೆ. ಆದರೆ ಇದರ ಜೊತೆಗೆ ರಾಜ್ಯ ಸರ್ಕಾರವು ಒಂದು ಪ್ರಮುಖ ತೀರ್ಮಾನವನ್ನು ಮಾಡಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಅರ್ಹರು ಯಾರು ಮತ್ತು ಅನರ್ಹರು ಯಾರು ಅಂತ ಪರಿಪೂರ್ಣವಾಗಿ ಮರುಪರಿಶೀಲಿಸಿ, ಮತ್ತೆ ಅರ್ಜಿ ಹಾಕುವ ನಿಯಮವನ್ನು ಜಾರಿಗೆ ತರಲಿದ್ದಾರೆ.

ಗೃಹಲಕ್ಷ್ಮಿ ಹಣ ಪಡೆಯಬೇಕಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾ?

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯು ಕೇವಲ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಬೇಕು ಎಂಬ ಕಾರಣಕ್ಕೆ, ರಾಜ್ಯದ ಮಹಿಳೆಯರು ಈಗಾಗಲೇ ಸಲ್ಲಿಸಿರುವಂತಹ ಅರ್ಜಿಗಳನ್ನು ಮರುಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಖಚಿತಪಡಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಅನರ್ಹರನ್ನು ಹೊರಗಿಡಲು ರಾಜ್ಯ ಸರ್ಕಾರವು ಅರ್ಜಿಗಳನ್ನು ಮರುಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಬೇಕು ಎಂಬ ಆಲೋಚನೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಿದ್ದಾರೆ.

ಯಾವ ಅನರ್ಹ ಫಲಾನುಭವಿಗಳಿರಬಹುದು?

  • ಯಾವ ಹೆಣ್ಣುಮಕ್ಕಳು ಸ್ವಂತ ವ್ಯಾಪಾರ ಅಥವಾ ಉದ್ಯಮ ನಡೆಸುತ್ತಿರುತ್ತಾರೋ ಮತ್ತು ಸರ್ಕಾರಕ್ಕೆ ಆದಾಯ ತೆರಿಗೆ (Income Tax) ಕಟ್ಟುವಂತವರೋ, ಅವರಿಗೆ ಈ ಯೋಜನೆ ಇನ್ನುಮುಂದೆ ಸಿಗುವುದಿಲ್ಲ.​
  • ಯಾವ ಕುಟುಂಬಗಳು ವ್ಯವಹಾರ ನಡೆಸಿ GST ರಿಟರ್ನ್ ಸಲ್ಲಿಸುತ್ತವೆಯೋ, ಅಂತಹ ಕುಟುಂಬದ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.​
  • ಮೃತರ ಹೆಸರಿನಲ್ಲಿ ಪ್ರತಿ ತಿಂಗಳ ಹಣ ಪಡೆಯುವಂತಹ ಫಲಾನುಭವಿಗಳಿಗೆ ಇನ್ನುಮುಂದೆ ಹಣ ಸಿಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ರಾಜ್ಯ ಸರ್ಕಾರವು ಈ ಯೋಜನೆಯಲ್ಲಿ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಅತ್ತೆ ಅಥವಾ ತಾಯಿ ಯಾರಾದರೂ ತೀರಿಕೊಂಡರೆ, ಅದೇ ಪಡಿತರ ಚೀಟಿಯಲ್ಲಿ (Ration Card) ಹೆಸರಿರುವ ಸೊಸೆ ಅಥವಾ ಮಗಳಿಗೆ ಈ ಯೋಜನೆಯ ಲಾಭ ಸಿಗುತ್ತದೆ ಎಂದು ರಾಜ್ಯ ಸರ್ಕಾರ ಈ ಬದಲಾವಣೆಯನ್ನು ಮಾಡಿದೆ.

ಈ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮೊದಲು ಆರ್ಥಿಕ ನೆರವು ಸಿಗಲಿ ಎಂಬ ಕಾರಣಕ್ಕೆ ಈ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಸ್ವಲ್ಪಮಟ್ಟಿಗೆ ಕುಟುಂಬ ನಡೆಸುವುದಕ್ಕೆ ಯಾವುದೇ ಆಡೆತಡೆ ಇಲ್ಲದ ಮತ್ತು ಆರ್ಥಿಕವಾಗಿ ಸಬಲರಾಗಿರುವ ಕುಟುಂಬಗಳಿಗೆ ಹಣ ನಿಲ್ಲಿಸಿದರೆ, ಆ ಉಳಿತಾಯದ ಹಣವನ್ನು ಬೇರೆ ಯೋಜನೆಗಳಿಗೆ ನೀಡಬಹುದು ಎಂಬ ಆಲೋಚನೆಯಲ್ಲಿ ಈ ಬದಲಾವಣೆಯನ್ನು ರಾಜ್ಯ ಸರ್ಕಾರ ಮಾಡಿದೆ.​

ಯೋಜನೆಯಿಂದ ಹಣ ಪಡೆಯುತ್ತಿರುವ ಮಹಿಳೆಯರು ನಿಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿ, ಮೊಬೈಲ್ ನಂಬರ್ ಅದಕ್ಕೇ ಲಿಂಕ್ ಇರಬೇಕು ಮತ್ತು ಬ್ಯಾಂಕ್ ಖಾತೆ ಹಾಗೂ ಪಡಿತರ ಚೀಟಿಯನ್ನು ಒಮ್ಮೆ KYC ಮಾಡಿಸಿ ಎಲ್ಲವನ್ನೂ ಪರಿಶೀಲಿಸಿ ಸರಿಪಡಿಸಿಕೊಳ್ಳಿ. ಯೋಜನೆಯ ಹಣ ಬಿಡುಗಡೆಯಾದಾಗ ಕೆಲವರಿಗೆ ಖಾತೆಗೆ ಬಾರದೇ ಇರುವ ಕಾರಣ ಹೀಗಿರುತ್ತದೆ. ಅದಕ್ಕಾಗಿ ಎಲ್ಲರೂ ಈ ಮೇಲ್ಕಂಡ ಎಲ್ಲ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ರಾಜ್ಯ ಸರ್ಕಾರದಿಂದ ಪ್ರಮುಖ ಮಾಹಿತಿ ಬಂದಿದೆ.​

ಗೃಹಲಷ್ಮೀ ಅಡಿಯಲ್ಲಿ ಹಲವು ಕುಟುಂಬಗಳಿಗೆ ಒಳ್ಳೆಯ ರೀತಿಯಿಂದ ಆರ್ಥಿಕ ಸಹಾಯವಾಗಿದೆ. ವರ್ಷಕ್ಕೆ 24,000 ರೂಪಾಯಿ ಹಣ ನೇರವಾಗಿ ಗೃಹಲಕ್ಷ್ಮಿ ಎಂಬ ಯೋಜನೆಯಡಿಯಲ್ಲಿ ಮಹಿಳೆಯರ ಖಾತೆಗೆ ಹೋಗುವುದರಿಂದ ಮನೆ ನಡೆಸುವುದಕ್ಕೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ಆರೋಗ್ಯದ ಸಮಸ್ಯೆಗಳಿಗೆ ಹಲವು ರೀತಿಗಳಿಂದ ಸಹಾಯವಾಗಿದೆ ಎಂದು ಕರ್ನಾಟಕದ ಜನತೆ ಮಾಹಿತಿ ತಿಳಿಸಿದ್ದಾರೆ.

ಹೊಸ ನಿಯಮಗಳಿಂದ ಮಹಿಳೆಯರಿಗೆ ಆತಂಕ?

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಅರ್ಹ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಲಾಭ ತಲುಪಬೇಕು ಎಂಬ ಆಲೋಚನೆಯಲ್ಲಿ, ಇಲ್ಲಿಯವರೆಗೂ ಸಲ್ಲಿಸಿರುವಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಮಹಿಳೆಯರು ಯಾರು ಮತ್ತು ಅನರ್ಹ ಮಹಿಳೆಯರು ಯಾರು ಎಂದು ವಿಂಗಡಿಸಿ, ಮುಂದೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ಕೆಲವು ದಿನಗಳಲ್ಲಿ ತಿಳಿಸುತ್ತೇವೆ ಎಂದು ರಾಜ್ಯ ಸರ್ಕಾರ ಭರವಸೆ ಕೊಟ್ಟಿದೆ.

ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕರು ಮತ್ತು ಮಹಿಳೆಯರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ಸರ್ಕಾರ ಅಧಿಕೃತವಾಗಿ ಹೇಳುವವರೆಗೆ ಸ್ವಲ್ಪ ಕಾಯಿರಿ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟ ನಿಲುವು ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಒಂದು ನಿಲುವು ಸ್ಪಷ್ಟಪಡಿಸುವುದೇನೆಂದರೆ, ಒಂದು ಜಂಟಿ ಕುಟುಂಬದಲ್ಲಿ ಬೇರೆ ಬೇರೆ ರೇಷನ್ ಕಾರ್ಡ್ ಇದ್ದರೆ ಎಲ್ಲರಿಗೂ ಹಣ ಬರುವುದಿಲ್ಲ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ಚರ್ಚೆ ನಡೆದಿದೆ.

ಈ ಹಿಂದೆ ಅತ್ತೆ, ಸೊಸೆ, ಮಗಳು, ತಾಯಿ ಇವರೆಲ್ಲರಿಗೂ ಈ ಯೋಜನೆಯಿಂದ ಪ್ರತಿ ತಿಂಗಳು ಹಣ ಜಮೆಯಾಗಿದೆ. ಆದರೆ ಸರ್ಕಾರ ಹೊಸ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅಂತ ಬದಲಾವಣೆ ಮಾಡಿದೆ. ಯಾಕೆಂದರೆ ಇದರಿಂದ ಸರ್ಕಾರದ ಹಣ ಉಳಿತಾಯವಾಗುತ್ತದೆ ಮತ್ತು ಬೇರೆ ಹಲವು ಜನಪರ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದಕ್ಕೆ ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ಕೆಲವು ಬದಲಾವಣೆಗಳನ್ನು ರಾಜ್ಯ ಸರ್ಕಾರ ಮಾಡಲಿದೆ.

ರಾಜ್ಯ ಸರ್ಕಾರದಿಂದ ಲಕ್ಷಾಂತರ ಖಾತೆಗಳ ಪರಿಶೀಲನೆ?

ಈಗಾಗಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳು 2000 ಹಣ ಪಡೆಯುತ್ತಿರುವ ಹೆಸರು, ವಿಳಾಸ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದೆ. ಸರಿಯಾದ ಮಾಹಿತಿ ಇರುವ ಮಹಿಳೆಯರಿಗೆ ತಡೆರಹಿತವಾಗಿ ಹಣ ಜಮೆಯಾಗಲಿದೆ ಮತ್ತು ತಪ್ಪು ಮಾಹಿತಿ ಇರುವ ಅರ್ಜಿಗಳಿಗೆ ಹಣ ಜಮೆಯಾಗುವುದು ಕಷ್ಟವಾಗಬಹುದು.

​ಕೆಲವು ಜಿಲ್ಲೆಗಳ ಕುಟುಂಬಗಳಲ್ಲಿ ರೇಷನ್ ಕಾರ್ಡ್‌ನಲ್ಲಿ ಮಹಿಳೆಯ ಹೆಸರಿರುತ್ತದೆ ಆದರೆ ಆ ಮಹಿಳೆ ಜೀವಂತ ಇರುವುದಿಲ್ಲ. ಇಂತಹ ಮೃತರ ಅರ್ಜಿಗಳನ್ನು ಹಾಕಿ ಹಣ ಪಡೆಯುತ್ತಿರುವ ಹಲವು ಪ್ರಕರಣಗಳು ತನಿಖೆಯಲ್ಲಿ ಕಂಡುಬಂದಿವೆ. ಇದರಿಂದ ಇಂತಹ ಅನರ್ಹ ಫಲಾನುಭವಿಗಳಿಗೆ ಹಣ ಹೋಗಬಾರದು ಎಂದು ರಾಜ್ಯ ಸರ್ಕಾರ ಕಠಿಣ ತೀರ್ಮಾನಿಸಿದೆ.

ಮೃತರ ಹೆಸರಲ್ಲಿ ಹಣ ಪಡೆದು ವಂಚನೆ ಮಾಡುವುದರಿಂದ, ರಾಜ್ಯ ಸರ್ಕಾರವು ಮುಂದೆ ಫಲಾನುಭವಿಗಳು ಜೀವಂತ ಪ್ರಮಾಣ ಪತ್ರ (Life Certificate) ಸಿದ್ಧಪಡಿಸುವ ನಿಯಮವನ್ನು ಜಾರಿಗೆ ತರಬೇಕು ಎಂಬ ಗಂಭೀರ ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಮತ್ತು ಮಹಿಳೆಯರು ಭಯಪಡಬೇಡಿ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಸಿಗಲಿದೆ, ಆದರೆ ಕೇವಲ ಅರ್ಹ ಮಹಿಳೆಯರಿಗೆ ಮಾತ್ರ.

2000 ರೂಪಾಯಿ ಹಣದಿಂದ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ. ಕುಟುಂಬಗಳಲ್ಲಿ ಸಣ್ಣಪುಟ್ಟ ದಿನನಿತ್ಯದ ಖರ್ಚುಗಳು ಇರಬಹುದು ಮತ್ತು ಕೆಲವು ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಲು ಇದು ಪ್ರೇರಣೆ ಮತ್ತು ನೆರವು ನೀಡಿದೆ.

ಉದಾಹರಣೆಗೆ: ಸಣ್ಣ ಅಂಗಡಿ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಹೈನುಗಾರಿಕೆ ಅಥವಾ ಹಾಲು ವ್ಯಾಪಾರ ಮುಂತಾದ ಕೆಲಸಗಳಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ತುಂಬಾ ಉಪಯುಕ್ತವಾಗಿದೆ. ಕರ್ನಾಟಕದ ಕೋಟ್ಯಂತರ ಮಹಿಳೆಯರಿಗೆ ಈ ಯೋಜನೆಯಿಂದ ಸಹಾಯವಾಗಿದ್ದು, ಇದು ದೇಶದಲ್ಲೇ ಅತೀ ದೊಡ್ಡ ಮಹಿಳಾ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ.

ಈ ಯೋಜನೆ ಕೇವಲ ಹಣಕಾಸಿನ ನೆರವು ಮಾತ್ರವಲ್ಲ, ಇದು ಎಷ್ಟೋ ಜನ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಕುಟುಂಬದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ.

​ಈ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಕುಟುಂಬಗಳಲ್ಲಿ ತಮ್ಮ EMI ಸಮಸ್ಯೆಗಳನ್ನು ತೀರಿಸಲಾಗಿದೆ ಹಾಗೂ ಶೇರ್ ಮಾರ್ಕೆಟ್‌ನಲ್ಲಿ (Share Market) ಮಹಿಳೆಯರು ಕೂಡ ಇನ್ವೆಸ್ಟ್ (Invest) ಮಾಡುವ ಮೂಲಕ ಡಿಜಿಟಲ್ ಯುಗಕ್ಕೆ ಮಹಿಳೆಯರು ಕೂಡ ದೊಡ್ಡ ಪಾತ್ರರಾಗಿದ್ದಾರೆ.

ಇದರಿಂದ ಬೆಳೆಯುವ ಮಕ್ಕಳಿಗೆ ದೇಶದ ಡಿಜಿಟಲ್ ಯುಗ ಪರಿಚಯವಾಗುತ್ತದೆ. ಮಕ್ಕಳಿಗೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಡಿಜಿಟಲ್ ಯುಗ ಮತ್ತು ಆರ್ಥಿಕ ಸಾಕ್ಷರತೆ ಪರಿಚಯಿಸುವುದರಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.

ಗೃಹಲಕ್ಷ್ಮಿ ಹಣ ನೇರವಾಗಿ ಮಹಿಳೆಯರ ಖಾತೆಗೆ

DBT ಮೂಲಕ ಬರುವುದರಿಂದ ಮಹಿಳೆಯರು, ಮೊದಲ ಬಾರಿಗೆ ಅದರಲ್ಲಿಯೂ ಹಳ್ಳಿಗಳಲ್ಲಿ ವಾಸಿಸುವ ಗ್ರಾಮೀಣ ಮಹಿಳೆಯರು ಬ್ಯಾಂಕಿಗೆ ಹೋಗಿ ಯಾವ ರೀತಿಯಲ್ಲಿ ಹಣವನ್ನು ಜಮೆ ಮಾಡುವುದು ಮತ್ತು ಹಣವನ್ನು ಹಿಂಪಡೆಯುವುದು ಎಂಬ ಬ್ಯಾಂಕಿಂಗ್ ಕಲಿಕೆಯಲ್ಲಿ ಸಕ್ರಿಯವಾಗಿ ಪಾತ್ರರಾಗುತ್ತಿದ್ದಾರೆ.

ಇಲ್ಲಿಯವರೆಗೂ ಕರ್ನಾಟಕದಲ್ಲಿ 1.29 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಶಸ್ವಿಯಾಗಿ ಜಮೆಯಾಗಿದೆ ಮತ್ತು ಈ 1.29 ಕೋಟ್ಯಂತರ ಮಹಿಳೆಯರಿಗೆ ಆರ್ಥಿಕತೆಯ ದೃಢವಾದ ನಿಲುವು ಕಂಡಿದೆ ಎಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ.

ಅನೇಕ ಗೃಹಿಣಿಯರು ಈ ಯೋಜನೆಯಿಂದ ನಿಜವಾದ ಆರ್ಥಿಕ ಸ್ವಾತಂತ್ರ್ಯದ ಅನುಭವವನ್ನು ಪಡೆದಿದ್ದಾರೆ. ಮನೆಯ ಸಣ್ಣಪುಟ್ಟ ವೈಯಕ್ತಿಕ ಅಗತ್ಯಗಳಿಗೆ ಯಾರನ್ನೂ ಕೇಳದೆ, ಕೈಚಾಚದೆ ಖರ್ಚು ಮಾಡುವ ಉತ್ತಮ ಅವಕಾಶ ಸಿಕ್ಕಿದೆ. ಕೆಲ ಕುಟುಂಬಗಳು ಈ ಹಣವನ್ನು ಮಕ್ಕಳ ಟ್ಯೂಷನ್ ಫೀಸ್, ಶಾಲಾ ಶುಲ್ಕ, ಪುಸ್ತಕಗಳ ಖರೀದಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ (Competitive Exams) ತಯಾರಿಗೆ ಬಳಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬಂದಿದೆ.

Comments

Leave a Reply

Your email address will not be published. Required fields are marked *