“ಕರ್ನಾಟಕದಲ್ಲಿ ಮಳೆ ಅಬ್ಬರ: 14 ಜಿಲ್ಲೆಗಳಿಗೆ ಎಚ್ಚರಿಕೆ, ರೈತರಿಗೆ ಗುಡ್ ನ್ಯೂಸ್!”

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿ ಹಲವಾರು ಕಡೆ ಹೆಚ್ಚಿನ ರೀತಿಯಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಹೊರಡಿಸಿದೆ. ಇದರಿಂದಾಗಿ ಕರ್ನಾಟಕದ ಜನತೆ ಜಾಗರೂಕರಾಗಿ ಓಡಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ, ಅದರಲ್ಲಿ ಪ್ರಮುಖವಾಗಿ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಈ ಭಾಗದಲ್ಲಿ ಇರುವಂತಹ ಜನ ತುಂಬಾ ಜಾಗರೂಕತೆಯಿಂದ ಇರಬೇಕಾಗಿ ಹವಾಮಾನ ಇಲಾಖೆಯು ಘೋಷಿಸಿದೆ.

ಅತಿ ಹೆಚ್ಚು ಬಾರಿ ಮಳೆ ಆಗುವ ಜಿಲ್ಲೆಗಳು?

​ವರದಿಯ ಪ್ರಕಾರ ಕೆಳಗಿನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾರಿ ಮಳೆ ಆಗುವ ಸಾಧ್ಯತೆ ಇದೆ
  • ಚಿಕ್ಕಮಗಳೂರು​
  • ಕೊಡಗು​
  • ಹಾಸನ​
  • ಮೈಸೂರು
  • ​ಶಿವಮೊಗ್ಗ
  • ​ದಕ್ಷಿಣ ಕನ್ನಡ​
  • ಉತ್ತರ ಕನ್ನಡ
  • ​ಉಡುಪಿ​

ಈ ಎಲ್ಲಾ ಜಿಲ್ಲೆಗಳ ಕೆಲವು ಕಡೆ ಗುಡುಗು ಮಿಂಚು ಬರುವ ಎಲ್ಲ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆಯು ಸ್ಪಷ್ಟಪಡಿಸಿದೆ. ಈ ಜಿಲ್ಲೆಗಳಲ್ಲಿ ಇರುವಂತಹ ಜನರು ತುಂಬಾ ಸುರಕ್ಷಿತವಾಗಿ ಇರುವುದು ಒಳ್ಳೆಯದು. ಯಾಕೆಂದರೆ, ಈ ಜಿಲ್ಲೆಗಳ ಕೆಲವು ಕಡೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನರು ತುಂಬಾ ಸುರಕ್ಷಿತವಾಗಿ ಓಡಾಡುವುದು ಒಳ್ಳೆಯದು

ಮುಂಗಾರು ಮಳೆಯು ಮತ್ತಷ್ಟು ಬಲಗೊಳ್ಳಲಿದೆ?

​ಮುಂಗಾರು ಮಳೆಯು ಕರ್ನಾಟಕದ ಹಲವು ಕಡೆ ಈಗಾಗಲೇ ಆವರಿಸಿದೆ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ಆವರಿಸಲಿದ್ದು ರೈತರಿಗೆ ಬಹಳ ಸಹಾಯವಾಗಲಿದೆ. ಮುಂಗಾರು ಬಿತ್ತನೆ ಬೇಗ ಮಾಡುವುದಕ್ಕೆ ಕರ್ನಾಟಕದ ಜನತೆಗೆ ಇದು ಸಂತೋಷಕರವಾದ ಸಮಯವಾಗಿದೆ. ಮುಂಗಾರು ಮಳೆಯು ಎಲ್ಲಾ ಜಿಲ್ಲೆಗಳಿಗೆ ಸಮಯಕ್ಕೆ ಸರಿಯಾಗಿ ಮಳೆಯಾಗುವ ಎಲ್ಲ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿದೆ.

ರೈತರ ಗಮನಕ್ಕೆ: ಅತಿ ಹೆಚ್ಚು ಮಳೆಯಾದರೆ ಭೂಮಿಯಲ್ಲಿ ನೀರು ನಿಲ್ಲುವುದರಿಂದ ಹೊಲಗಳಲ್ಲಿ ಬಿತ್ತನೆ ಮಾಡಲು ಕಷ್ಟವಾಗುತ್ತದೆ. ಅತಿ ಹೆಚ್ಚು ಮಳೆಯಾಗುವುದರಿಂದ ರೈತರಿಗೆ ಬಿತ್ತನೆ ಮಾಡುವುದು ಹಾಗೂ ಬಿತ್ತನೆ ಮಾಡಿದ ನಂತರ ಮಳೆಯಾಗಿ ಎಲ್ಲ ಬೆಳೆ ನಾಶವಾಗುವ ಸಾಧ್ಯತೆಗಳು ಇರುತ್ತವೆ. ಇದರಿಂದ ರೈತರು ಮುಂದಾಲೋಚನೆ ಮಾಡಿ ಬಿತ್ತನೆ ಮಾಡಿದರೆ ಉತ್ತಮ.

ಬೆಂಗಳೂರಿನಂತಹ ನಗರದಲ್ಲಿ ಹವಾಮಾನ ಹೇಗಿರಲಿದೆ?

ಬೆಂಗಳೂರಿನ ಜನತೆ ನಗರದಲ್ಲಿ ಸಾಯಂಕಾಲದ ವೇಳೆಯಲ್ಲಿ ಓಡಾಡುವಾಗ ಸ್ವಲ್ಪ ಜಾಗರೂಕತೆಯಿಂದ ಓಡಾಡಬೇಕು. ಯಾಕಂದರೆ, ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನ ನಗರದಲ್ಲಿ ಸಾಯಂಕಾಲ ಮತ್ತು ರಾತ್ರಿ ವೇಳೆಯಲ್ಲಿ ಪ್ರತಿದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ಮಳೆಯು ಗುಡುಗು ಸಹಿತ ಇರಲಿದೆ.

ರೈತರಿಗೆ ಖುಷಿಯಾದ ಸುದ್ದಿ

ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಕೆಲ ರಾಜ್ಯದ ಭಾಗಗಳಲ್ಲಿ ನೀರಿನ ಸಮಸ್ಯೆ ಇರುವ ರೈತರಿಗೆ ಈ ಮಳೆಯು ಅಲ್ಲಿನ ಭಾಗದ ಎಲ್ಲಾ ರೈತರಿಗೆ ಸಹಾಯವಾಗುತ್ತದೆ ಎಂದು ಕೃಷಿ ತಜ್ಞರು ಹೇಳಿದ್ದಾರೆ. ಅತಿ ಹೆಚ್ಚು ನೀರಿನಿಂದ ಬೆಳೆಯುವ ಬೆಳೆಗಳಿಗೆ ಇದು ಬಹಳ ಅನುಕೂಲವಾಗುತ್ತದೆ. ಕೆಲ ಭಾಗಗಳಲ್ಲಿ ಅತಿ ಹೆಚ್ಚು ನೀರಿನ ಕೊರತೆಯಿಂದ ರೈತರು ಬಳಲುತ್ತಿದ್ದಾರೆ, ಅವರಿಗೆ ಈ ಮಳೆಯಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಮತ್ತು ಈ ಮಳೆಯು ಅವರಿಗೆ ವರದಾನವಾಗಿದೆ.

ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ?

ಭಾರಿ ಮಳೆಯಾಗುವ ಪ್ರದೇಶಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳು ಮತ್ತು ಎದುರಾಗಬಹುದಾದ ಅಪಾಯಗಳು:
  • ರಸ್ತೆ ಜಲಾವೃತ: ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಲ್ಲುವ ಸಾಧ್ಯತೆ ಇರುತ್ತದೆ.
  • ಮೀನುಗಾರರಿಗೆ ಎಚ್ಚರಿಕೆ: ಮಳೆ ಬರುವ ಸಂದರ್ಭದಲ್ಲಿ ಮೀನುಗಾರರು ಸಮುದ್ರಕ್ಕೆ ಹೋಗುವ ಹರಸಾಹಸ ಪಡಬಾರದು.​
  • ಜಲಮೂಲಗಳ ಭರ್ತಿ: ನದಿಗಳು ಮತ್ತು ಹಳ್ಳಗಳು ತುಂಬಿ ಹರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.​
  • ಭೂಕುಸಿತದ ಭೀತಿ: ಗುಡ್ಡಗಳಿರುವಂತಹ ಪ್ರದೇಶಗಳಲ್ಲಿ ಭೂಕುಸಿತವಾಗುವ ಪ್ರಮಾಣದ ಅಪಾಯವಿರುತ್ತದೆ.​
  • ವಿದ್ಯುತ್ ಕಂಬಗಳು: ಮಳೆ ಆಗುವ ಸಂದರ್ಭದಲ್ಲಿ ವಿದ್ಯುತ್ ಇರುವಂತಹ ಕಂಬಗಳ ಬಳಿ ನಿಲ್ಲಬಾರದು.​
  • ಮರಗಳ ಆಶ್ರಯ ಬೇಡ: ಮರ ಗಿಡಗಳು ಇರುವಂತಹ ಸ್ಥಳದಲ್ಲಿ ಹೋಗಿ ನಿಲ್ಲುವುದನ್ನು ತಪ್ಪಿಸಿ.​ವಾಹನ
  • ಪಾರ್ಕಿಂಗ್: ಮರಗಳಿರುವಂತಹ ಸ್ಥಳಗಳಲ್ಲಿ ಕಾರ್ ಪಾರ್ಕ್ ಮಾಡುವುದನ್ನು ನಿಲ್ಲಿಸಿ.

ಹವಾಮಾನ ಇಲಾಖೆಯಿಂದ 9 ಜಿಲ್ಲೆಗಳಿಗೆ ‘ಎಲ್ಲೋ ಅಲರ್ಟ್’ ಘೋಷಣೆ?

ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ಕೆಲವು ಒಂಬತ್ತು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ (Yellow Alert) ಘೋಷಿಸಿದೆ. ಎಲ್ಲೋ ಅಲರ್ಟ್ ಘೋಷಿಸಿರುವಂತಹ ಪ್ರದೇಶಗಳಲ್ಲಿರುವ ಜನರು ಬಹಳ ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು.

ಪ್ರಮುಖ ಜಿಲ್ಲೆಗಳು: ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಇನ್ನು ಕೆಲವು ಜಿಲ್ಲೆಗಳಿಗೆ ಸೇರಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.

ಆರೋಗ್ಯದ ಬಗ್ಗೆ ಎಚ್ಚರಿಕೆ?

ರಾಜ್ಯದ ಹಲವಾರು ಕಡೆ ಮಳೆ ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಬಹಳ ಸುರಕ್ಷಿತವಾಗಿ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ. ಯಾಕೆಂದರೆ ತಂಪು ವಾತಾವರಣ ಕೂಡಿಕೊಂಡಾಗ ಸಾರ್ವಜನಿಕರಲ್ಲಿ ಡೆಂಗ್ಯೂ, ಮಲೇರಿಯಾ, ಜ್ವರ, ಶೀತ, ಕೆಮ್ಮು ಇಂತಹ ರೋಗಗಳು ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತದೆ. ಆದ್ದರಿಂದ ಜನರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಉತ್ತಮ.

ಮುಂದಿನ ಎಷ್ಟು ದಿನಗಳ ಕಾಲ ಮಳೆ ಇರಲಿದೆ?

ರಾಜ್ಯದ ಹಲವು ಕಡೆ ಅತಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆಯು ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ 18 ರಂದು ಸತತವಾಗಿ ಮಳೆ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ 5 ದಿನದ ವರೆಗೆ ಈ 9 ಜಿಲ್ಲೆಗಳ ಜನರು ಸುರಕ್ಷಿತವಾಗಿ ಸಂಚಾರ ಮಾಡುವುದು ಅತ್ಯವಶ್ಯಕ.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆ?

ಕರಾವಳಿ ಮತ್ತು ಮಲೆನಾಡಿನಂತಹ ಪ್ರದೇಶಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ, ಅಲ್ಲಿನ ಜಿಲ್ಲಾಡಳಿತದ ಪ್ರಕಟಣೆಗಳಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗುವ ತೀರ್ಮಾನ ನಡೆಯುತ್ತದೆ. ಪೋಷಕರು ಆಯಾ ಜಿಲ್ಲಾಡಳಿತದ ಅಧಿಕೃತ ಪ್ರಕಟಣೆಯನ್ನು ಕಡ್ಡಾಯವಾಗಿ ಅನುಸರಿಸಬೇಕು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವುದು ಹೇಗೆ?

ರಾಜ್ಯದ ಜನರು ಬೇರೆ ಪ್ರದೇಶಗಳಿಗೆ ಹೋಗಲು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡಲು ಹವಾಮಾನ ಇಲಾಖೆಯ ಸಹಾಯ/ಮಾಹಿತಿ ಪಡೆದು ಸಂಚಾರ ಮಾಡುವುದು ಒಳ್ಳೆಯದು. ಯಾಕೆಂದರೆ ನೀವು ಹೋಗುವ ರಸ್ತೆ ಮುಂದೆ ಹೇಗೆ ಇದೆ ಎಂದು ತಿಳಿದುಕೊಂಡು ಹೋಗುವುದು ಉತ್ತಮ. ಹವಾಮಾನ ಇಲಾಖೆಯ ಅಧಿಕೃತ ಮಾಹಿತಿಯ ಸಹಾಯದಿಂದ ಪ್ರಯಾಣ ಮಾಡುವುದು ಸೂಕ್ತ.

  • ಬಿರುಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ

ಕೆಲ ಭಾಗಗಳಲ್ಲಿ ಮಳೆಯಾಗುವ ಜೊತೆಗೆ ಗಂಟೆಗೆ 30 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಮರಗಳ ಕೆಳಗೆ ಮತ್ತು ದುರ್ಬಲ ಕಟ್ಟಡಗಳಿಂದ ದೂರವಿರುವುದು ಅತ್ಯಗತ್ಯ.

ಜೂನ್ 17 ಮತ್ತು 18 ರಂದು ಮತ್ತೆ ಮಳೆ ಆಗುವ ಮುನ್ಸೂಚನೆ?

ಜೂನ್ 17 ಮತ್ತು ಜೂನ್ 18 ರಂದು ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಈ ಎರಡು ದಿನ ಅತಿ ಹೆಚ್ಚು ಬಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಸ್ಪಷ್ಟವಾಗಿ ದೃಢೀಕರಿಸಿದೆ.

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವುದು?

ಬೆಂಗಳೂರಿನಂತಹ ನಗರದಲ್ಲಿ ಸತತವಾಗಿ ಒಂದು ಗಂಟೆ ಕಾಲ ಮಳೆಯಾದರೆ ರಸ್ತೆಗಳಲ್ಲಿ ಅಗಾಧ ಪ್ರಮಾಣದಲ್ಲಿ ನೀರು ನಿಲ್ಲುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ಸಮಸ್ಯೆಯಾಗುತ್ತದೆ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಮಸ್ಯೆಯಾಗುತ್ತದೆ ಮತ್ತು ದಿನನಿತ್ಯ ಸಮಯಕ್ಕೆ ಸರಿಯಾಗಿ ಆಫೀಸ್ ಗಳಿಗೆ ತೆರಳುವಂತಹ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುವಂತಹ ಸಮಸ್ಯೆ ಎದುರಾಗುತ್ತದೆ

ಚಾರ್ಮಾಡಿ ಘಾಟ್ ಸೇರಿದಂತೆ ಘಾಟ್ ರಸ್ತೆಗಳಲ್ಲಿ ಅಪಾಯ!

ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಮತ್ತು ಪಶ್ಚಿಮ ಭಾಗದ ರಸ್ತೆಗಳಲ್ಲಿ ಬಂಡೆ ಕುಸಿತ ಹಾಗೂ ಮಣ್ಣು ಜಾರುವ ಘಟನೆಗಳು ಸಂಭವಿಸಿವೆ. ಆದ್ದರಿಂದ ಈ ರಸ್ತೆಗಳಲ್ಲಿ ಓಡಾಡುವಂತಹ ಸಾರ್ವಜನಿಕರು ಸುರಕ್ಷಿತವಾಗಿ ಓಡಾಡುವುದು ಅಥವಾ ಕೆಲವು ದಿನಗಳ ಕಾಲ ಮಳೆ ನಿಲ್ಲುವವರೆಗೂ ಓಡಾಟವನ್ನು ನಿಲ್ಲಿಸುವುದು ಉತ್ತಮ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಅಧಿಕಾರಿಗಳ ಸೂಚನೆ: ಈ ಮಾರ್ಗಗಳಲ್ಲಿ ಪ್ರಯಾಣಿಸಬೇಕಾದರೆ ಹವಾಮಾನ ಇಲಾಖೆಯ ಮಾಹಿತಿ ಪಡೆದು, ಆ ರಸ್ತೆಗಳಲ್ಲಿ ಪ್ರಯಾಣಿಸುವುದು ಸುರಕ್ಷಿತವಾಗಿದ್ದರೆ ಮಾತ್ರ ಪ್ರಯಾಣಿಸಿ. ಹಾಗೂ ರಾತ್ರಿ ವೇಳೆಯಲ್ಲಿ ಆ ಭಾಗದ ಮಾರ್ಗಗಳಲ್ಲಿ ಓಡಾಡುವುದನ್ನು ತಪ್ಪಿಸಲು ಅಧಿಕಾರಿಗಳು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ಮುಂದಿನ ವಾರದವರೆಗೆ ತಾಪಮಾನ ಇಳಿಕೆ?

ರಾಜ್ಯದಲ್ಲಿ ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಕಳೆದ ಕೆಲವು ದಿನಗಳಿಂದ ಇದ್ದ ಬಿಸಿಲಿನ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ 5 ದಿನಗಳಲ್ಲಿ ಹೆಚ್ಚಿನ ತಾಪಮಾನದಲ್ಲಿ ಇಳಿಕೆ ಆಗಲಿದ್ದು, ಜನರಿಗೆ ಉಷ್ಣತೆಯಿಂದ (ಸೆಕೆಯಿಂದ) ಸ್ವಲ್ಪ ಮಟ್ಟಿನ ಪರಿಹಾರ ಸಿಗಲಿದೆ ಎಂದು ಹವಾಮಾನ ಇಲಾಖೆ ವರದಿ ಕೊಟ್ಟಿದೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ?

ಹೆಚ್ಚಿನ ರೀತಿಯಲ್ಲಿ ಮಳೆಯಾಗುವ ಮತ್ತು ಬಿರುಗಾಳಿಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ತಾತ್ಕಾಲಿಕ ವಿದ್ಯುತ್ ವ್ಯತ್ಯಯ (Power Cut) ಉಂಟಾಗಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಜನರು ಟಾರ್ಚ್, ಚಾರ್ಜ್ ಮಾಡಿದ ಮೊಬೈಲ್ ಹಾಗೂ ಅಗತ್ಯ ವಸ್ತುಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ. ಹಳ್ಳಿಗಳಲ್ಲಿ ಬಹಳ ಜನರು ಹೊರಗಡೆ ಇರುವ ಕಾರಣ ಈ ನಿಯಮವನ್ನು ಪಾಲಿಸುವುದು ಒಳ್ಳೆಯದು ಎಂದು ಹವಾಮಾನ ಇಲಾಖೆಯು ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದೆ. ಅದರ ಅನುಸಾರವಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು ಒಳ್ಳೆಯದು.