ಭಾರತದಲ್ಲಿ AI ಮತ್ತು ಸ್ಟಾರ್ಟಪ್ ಯುಗದ ಮಹಾ ಕ್ರಾಂತಿ

"ಭಾರತದ ಸ್ಟಾರ್ಟಪ್ ಲೋಕದಲ್ಲಿ ಹೊಸ ಕ್ರಾಂತಿ – AI, ಹೂಡಿಕೆ ಮತ್ತು ಯುವ ಉದ್ಯಮಿಗಳು"

ಒಂದು ಕಾಲದಲ್ಲಿ ಅಮೇರಿಕ ಮತ್ತು ಚೀನಾ ದೇಶಗಳು ಮಾತ್ರ ಸ್ಟಾರ್ಟಪ್ ಕಂಪನಿಗಳನ್ನು ಆಳುತ್ತಿದ್ದವು. ಆದರೆ ಈಗ ನಮ್ಮ ಭಾರತ ದೇಶವು ಕೂಡ ಸ್ಟಾರ್ಟಪ್ ಕಂಪನಿಗಳನ್ನು ಸ್ಥಾಪಿಸುವಲ್ಲಿ ಪ್ರಪಂಚವೇ ತಿರುಗಿ ನೋಡುವಷ್ಟು ವೇಗವಾಗಿ ಮುನ್ನುಗ್ಗುತ್ತಿದೆ. ಈ AI ಯುಗದಲ್ಲಿ ಭಾರತ ದೇಶವು ಶುರು ಮಾಡಿರುವ ಸ್ಟಾರ್ಟಪ್ ಕಂಪನಿಗಳಿಗೆ ವಿದೇಶಿ ದೇಶಗಳಿಂದ ಹೂಡಿಕೆ ಮಾಡಲು ಹೂಡಿಕೆದಾರರು ಸಿದ್ಧರಾಗಿದ್ದಾರೆ. ಇನ್ನು ನಮ್ಮ ದೇಶವು ಪ್ರಪಂಚದ ಟಾಪ್ ಸ್ಟಾರ್ಟಪ್ ಕಂಪನಿಗಳನ್ನು ಸ್ಥಾಪಿಸುವ ದಾಖಲೆಗೆ ಸೇರಲಿದೆ.

ಸರ್ಕಾರದಿಂದ AI ಕಾರ್ಯಕ್ಕೆ ಮೂಲಸೌಕರ್ಯ ಒದಗಿಸುವ ಯೋಜನೆ

ಭಾರತ ಸರ್ಕಾರವು ನಮ್ಮ ದೇಶದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈಗ ಭಾರತ ದೇಶವು ಇನ್ನು ಒಂದು ಹೆಜ್ಜೆ ಮುಂದೆ ಇಡಲಿದೆ, ಅದೇ “AI ಯುಗ”. ಈ AI ಯೋಜನೆಯನ್ನು ಭಾರತ ದೇಶವು ಅಭಿವೃದ್ಧಿಪಡಿಸುವುದರಿಂದ ಹಲವು ಜನರಿಗೆ ಕೆಲಸ ಹಾಗೂ ಒಳ್ಳೆ ರೀತಿಯ ಸ್ಟಾರ್ಟಪ್‌ಗಳು ಲಭ್ಯವಾಗುತ್ತವೆ. ಇದರಿಂದ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ತುಂಬಾ ಒಳ್ಳೆ ರೀತಿಯಲ್ಲಿ ಉಪಯೋಗವಾಗುತ್ತದೆ. AI ಕೆಲಸದಿಂದ ಅತೀ ವೇಗವಾಗಿ ಹಾಗೂ ಸುಲಭವಾಗಿ ಕೆಲಸಗಳು ಸಾಗುತ್ತವೆ ಮತ್ತು ನಮ್ಮ ದೇಶವು ತಂತ್ರಜ್ಞಾನದ ಹಾದಿಯಲ್ಲಿ ಮುಂದುವರೆಯುತ್ತದೆ

ಪ್ರಪಂಚದ ಹಲವು ಕಡೆ AI ಯೋಜನೆಗೆ ಭಾರಿ ಹೂಡಿಕೆ

ಈಗಿನ ಭಾರತ ದೇಶದಲ್ಲಿ AI ಯೋಜನೆಯನ್ನು ಹಲವು ಜನರು ಉಪಯೋಗಿಸುತ್ತಿರುವುದರಿಂದ, AI ಕ್ಷೇತ್ರದ ಸ್ಟಾರ್ಟಪ್‌ಗಳು ಅತೀ ವೇಗವಾಗಿ ಬೆಳೆಯುತ್ತಿವೆ. AI ಯೋಜನೆಯಿಂದ ದೇಶದ ಜನರಿಗೆ ಬಹಳ ರೀತಿಯಲ್ಲಿ ಒಳ್ಳೆಯದಾಗಿದೆ. ಉದಾಹರಣೆಗೆ: ಶಿಕ್ಷಣ (Education), ಕಂಟೆಂಟ್ ಕ್ರಿಯೇಟರ್ಸ್ (Content Creators), ಐಟಿ ಕಂಪನಿಗಳು (IT Companies) ಮುಂತಾದ ಹಲವು ಜನರಿಗೆ ಸುಲಭದ ದಾರಿಯಾಗಿದೆ.

ವಿಶೇಷ ಸಾಧನೆ: ಈಗಿನ ಸ್ಟಾರ್ಟಪ್ ಆದ Sarvam AI ಸುಮಾರು $234 ಮಿಲಿಯನ್ ಹೂಡಿಕೆ ಪಡೆದು, $1.5 ಬಿಲಿಯನ್ ಮೌಲ್ಯವನ್ನು ತಲುಪಿದೆ.

ಡೀಪ್‌ಟೆಕ್ ಮತ್ತು ಸಂಶೋಧನಾ ವಿಭಾಗದಲ್ಲಿ ಭಾರಿ ಪ್ರಮಾಣದ ಸಹಭಾಗಿತ್ವ

AI ಯೋಜನೆಗೆ ನಮ್ಮ ದೇಶದ ಪ್ರಮುಖ ಟೆಕ್ ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿಕೊಂಡು AI ಕ್ಷೇತ್ರಕ್ಕೆ ಹೊಸ ಉತ್ತೇಜನ ಕೊಡುತ್ತಿವೆ. ಇದು ಹೊಸ ಸ್ಟಾರ್ಟಪ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತದೆ. ದೇಶದ ಜನರಿಗೆ ತಂತ್ರಜ್ಞಾನದಲ್ಲಿ ಹೊಸ ಹೊಸ ಯೋಚನೆಗಳು ಬರುತ್ತವೆ ಮತ್ತು ದೇಶ ಅಭಿವೃದ್ಧಿ ಹೊಂದಲು ಇದು ಕಾರಣವಾಗುತ್ತದೆ.

ದೇಶವು AI ಯೋಜನೆಗೆ ಜೂನ್ ಮೊದಲನೇ ವಾರವೇ ಕೋಟ್ಯಾಂತರ ಹೂಡಿಕೆ

ನಮ್ಮ ದೇಶದ ಸ್ಟಾರ್ಟಪ್ ಕಂಪನಿಗಳು ಜೂನ್ ಮೊದಲನೇ ವಾರವೇ 180 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿವೆ. ಇದು ಜನರನ್ನು ಇನ್ನು ಆಕರ್ಷಿಸಲು ಉತ್ತೇಜನ ನೀಡುತ್ತದೆ. ಇದರಿಂದ ಹೂಡಿಕೆದಾರರ ವಿಶ್ವಾಸ ಇನ್ನು ಹೆಚ್ಚಾಗುತ್ತದೆ.

ಬೆಂಗಳೂರಿನಲ್ಲಿ AI ಸ್ಟಾರ್ಟಪ್‌ಗಳ ಪ್ರಾಬಲ್ಯ

ಫಿನ್‌ಟೆಕ್ ಮತ್ತು ಸ್ಪೇಸ್‌ಟೆಕ್ AI ಯೋಜನೆಗೆ ಈ ಎರಡು AI ಸ್ಟಾರ್ಟಪ್‌ಗಳು ಬಹಳ ಮುಂಚೂಣಿಯಲ್ಲಿದ್ದು, ಬೆಂಗಳೂರಿನ ಜನರು ಮತ್ತು ಹೊಸದಾಗಿ ಶುರುಮಾಡುವಂತಹ ಸ್ಟಾರ್ಟಪ್ ಕಂಪನಿಗಳಿಗೆ ಹೆಚ್ಚಿನ ಹೂಡಿಕೆ ಸಿಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಹಲವು ಕಂಪನಿಗಳು ಭಾರಿ ಪ್ರಮಾಣದ ಹೂಡಿಕೆಯನ್ನು ಪಡೆಯುತ್ತಿವೆ.

ಭಾರತವು ಸ್ಪೇಸ್‌ಟೆಕ್ ಅಭಿವೃದ್ಧಿಯಲ್ಲಿ ಬೆಳವಣಿಗೆ

ಭಾರತೀಯ ಸ್ಪೇಸ್ ಸ್ಟಾರ್ಟಪ್ ಆದ SatSure AI ತಂತ್ರಜ್ಞಾನದ ಸಹಾಯದಿಂದ ಭಾರಿ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ. ಇದರಿಂದ ಭೂಮಿಯ ಅವಲೋಕನ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ಇದು ಭಾರತದ ಅಭಿವೃದ್ಧಿಗೆ ಮತ್ತು ಜನರ ಆಲೋಚನಾ ಶಕ್ತಿಯನ್ನು ಹೆಚ್ಚಿಸಲು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗುತ್ತದೆ.

ವಿದ್ಯಾರ್ಥಿ ಸ್ಟಾರ್ಟಪ್‌ಗಳ ಹೆಚ್ಚಳ

ಈಗಿನ ವಿದ್ಯಾರ್ಥಿಗಳ ಯೋಚನೆಯು ಬಹಳ ವಿಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳು ಕೂಡ ಇವತ್ತು ಉದ್ಯಮಿಯಾಗುತ್ತಿದ್ದಾರೆ. ಮೊನ್ನೆ ನಡೆದ “ಡೆಮೋ ಡೇ” ಕಾರ್ಯಕ್ರಮದಲ್ಲಿ ಸುಮಾರು 18 ವಿದ್ಯಾರ್ಥಿಗಳ ಸ್ಟಾರ್ಟಪ್ ಆಲೋಚನೆಗಳು ಕೋಟ್ಯಾಂತರ ಮೌಲ್ಯದ ಹೂಡಿಕೆಯನ್ನು ಪಡೆದುಕೊಂಡಿವೆ. ಇದರಿಂದ ಯುವಕರಲ್ಲಿ ಹೊಸ ಚೈತನ್ಯ ಶುರುವಾಗಿದೆ. ವಿದ್ಯಾರ್ಥಿಗಳ ಸ್ಟಾರ್ಟಪ್ ಆಲೋಚನೆಗಳು ಬಹಳ ವಿಭಿನ್ನವಾಗಿರುತ್ತವೆ ಎಂದು ಕೆಲ ಉದ್ಯಮಿಗಳು ತಿಳಿಸಿದ್ದಾರೆ.

ಸ್ಟಾರ್ಟಪ್ ಆಲೋಚನೆಯ ಪರಿಣಾಮ

ಕೇಂದ್ರ ಸರ್ಕಾರವು ಒಂದು ಮಹತ್ತರ ತೀರ್ಮಾನ ಮಾಡಿದೆ. ಸ್ಟಾರ್ಟಪ್‌ಗಳನ್ನು ಕೇವಲ ಮೆಟ್ರೋ ಸಿಟಿಗಳಲ್ಲಷ್ಟೇ ಅಲ್ಲದೆ, ಸಣ್ಣ ಸಣ್ಣ ನಗರಗಳಲ್ಲಿಯೂ ಸ್ಥಾಪಿಸಬಹುದು. ಇದರಿಂದ ಹಲವು ಜನರಿಗೆ ಕೆಲಸ ಕೂಡ ಸಿಗುತ್ತದೆ ಮತ್ತು ಅವರೂ ಕೂಡ ಉದ್ಯಮಿಯಾಗಬಹುದು ಎಂಬ ಆಲೋಚನೆಯಲ್ಲಿ ಕೇಂದ್ರ ಸರ್ಕಾರವು ಈ ನಿಯಮವನ್ನು ಜಾರಿಗೊಳಿಸಲು ತೀರ್ಮಾನಿಸಿದೆ.

ವಿದೇಶಿ ಹೂಡಿಕೆದಾರರ ಕಣ್ಣು ಭಾರತದ ಮೇಲೆ

ಭಾರತ ದೇಶದ ಸ್ಟಾರ್ಟಪ್ ಯೋಜನೆಯು ದೇಶದ ಅಭಿವೃದ್ಧಿಗೆ ಹೆಸರಾಗಿದೆ. ಭಾರತದ ಡಿಜಿಟಲ್ ಬೆಳವಣಿಗೆ ಮತ್ತು ಜನರ ಪ್ರತಿಭೆಯನ್ನು ವಿದೇಶಿಗರು ಗುರುತಿಸಿ, ನಮ್ಮ ದೇಶದ ಸ್ಟಾರ್ಟಪ್‌ಗಳಿಗೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಉದ್ಯೋಗದ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ದೇಶವು ಅಭಿವೃದ್ಧಿಗೆ ಹೆಸರುವಾಸಿಯಾಗುತ್ತದೆ.

ಸ್ಪೇಸ್‌ಟೆಕ್ ಮತ್ತು ಅಗ್ರಿಟೆಕ್ ಹೊಸ ಯೋಜನೆ

AI ಜೊತೆಗೆ ಸ್ಪೇಸ್‌ಟೆಕ್ ಮತ್ತು ಅಗ್ರಿಟೆಕ್ ಕ್ಷೇತ್ರದಲ್ಲಿ ಕೂಡ ನಮ್ಮ ದೇಶ ಮುಂದುವರೆಯುತ್ತಿದೆ. ಇದರಿಂದ ದೇಶದ ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ತಂತ್ರಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಇನ್ನು ಸುಲಭವಾಗುತ್ತದೆ.

ಮಹಿಳೆಯರಿಗೂ ಕೂಡ ಉದ್ಯಮಿಯಾಗುವ ಅವಕಾಶ

ಮಹಿಳೆಯರು ದೇಶದ ಹಲವು ಕಡೆ ಈಗಾಗಲೇ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಅವರು ನಡೆಸುತ್ತಿರುವಂತಹ ಸ್ಟಾರ್ಟಪ್‌ಗಳು ತುಂಬಾ ಚೆನ್ನಾಗಿ ನಡೆಯುತ್ತಿವೆ ಮತ್ತು ಮಹಿಳೆಯರು ಅದ್ಭುತವಾದ ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆಯರು ನಡೆಸುತ್ತಿರುವ ವ್ಯವಹಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರೋಗ್ಯ, ಶಿಕ್ಷಣ ಮುಂತಾದ ವ್ಯವಹಾರಗಳಲ್ಲಿ ಅವರು ಮುನ್ನೆಡೆಯುತ್ತಿದ್ದಾರೆ. AI ಯೋಜನೆಯಿಂದ ಇನ್ನು ಹಲವು ಸ್ಟಾರ್ಟಪ್‌ಗಳು ಸ್ಥಾಪನೆಯಾಗುತ್ತವೆ. ನಮ್ಮ ದೇಶದಲ್ಲಿ ಮಹಿಳೆಯರ ಪಾತ್ರ ಕೂಡ ಉದ್ಯಮ ರಂಗದಲ್ಲಿ ಜಗತ್ತನ್ನೇ ಮೀರಿಸುವಂತಹ ಸಾಧನೆಯಾಗಲಿದೆ.

ಉದ್ಯೋಗದಲ್ಲಿ ಭಾರಿ ಬದಲಾವಣೆ

ಭಾರತ ದೇಶದಲ್ಲಿ ಉದ್ಯೋಗದ ಸಮಸ್ಯೆ ತುಂಬಾ ವಿಪರೀತವಾಗಿದೆ. ಆದರೆ AI ಸ್ಟಾರ್ಟಪ್‌ಗಳಿಂದ ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತವೆ. ಯುವಕರ ಹೊಸ ಆಲೋಚನೆಗಳು ಮುಂದಿನ ದೇಶದ ಅಭಿವೃದ್ಧಿಗೆ ತುಂಬಾ ಉಪಯುಕ್ತವಾದ ಕಾರ್ಯವಾಗುತ್ತವೆ ಮತ್ತು ಮುಂದಿನ ಪೀಳಿಗೆಗೆ ಉದ್ಯೋಗದ ಕೊರತೆ ಇರದಂತೆ ಈಗಿನ ಯುವಕರು ಯೋಚಿಸಿ ಒಳ್ಳೆ ಅಭಿವೃದ್ಧಿಯನ್ನು ಮಾಡುತ್ತಾರೆ ಹಾಗೂ ಜನರ ಸಮಸ್ಯೆಗಳಿಗೆ ಬದ್ಧರಾಗಿರುತ್ತಾರೆ.

ಭಾರತೀಯ ಭಾಷೆಗಳಿಗೆ ಆದ್ಯತೆ

​AI ಯೋಜನೆಯು ಸಾಮಾನ್ಯ ಜನರಿಗೆ ತುಂಬಾ ಸಹಕಾರಿಯಾಗಿದೆ. ಕೆಲವು ಭಾಷೆಗಳು ಗೊತ್ತಿಲ್ಲದ ಕಾರಣ, ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಮಾತೃಭಾಷೆಗಳ ಮೂಲಕವೇ ಕೆಲಸ ಮಾಡಲು ದೇಶದ ಜನರಿಗೆ ಇದು ಅನುಕೂಲವಾಗುತ್ತದೆ. ಬೇರೆ ರಾಜ್ಯದಿಂದ ಬಂದಂತಹ ಜನರಿಗೆ AI ಭಾಷಾ ತಂತ್ರಜ್ಞಾನವು ಸ್ಥಳೀಯ ಜನರೊಂದಿಗೆ ಮಾತನಾಡಲು ಮತ್ತು ಸಂಭಾಷಣೆ ನಡೆಸಲು ಸಹಾಯಕವಾಗುತ್ತದೆ. ಇಂಗ್ಲಿಷ್ ಗೊತ್ತಿಲ್ಲದ ಎಷ್ಟೋ ಜನರಿಗೆ ಇದು ಒಳ್ಳೆ ರೀತಿಯಲ್ಲಿ ಉಪಯುಕ್ತವಾಗುತ್ತದೆ.

ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ಕೂಡ ಸ್ಟಾರ್ಟಪ್ ಪ್ರಾರಂಭ

ಈ ಹಿಂದೆ ಬೆಂಗಳೂರು, ಮುಂಬೈ, ದೆಹಲಿಯಂತಹ ದೊಡ್ಡ ನಗರಗಳಲ್ಲಿ ಮಾತ್ರ ಉದ್ಯಮಿಗಳು ಕಂಪನಿಗಳನ್ನು ಪ್ರಾರಂಭಿಸುತ್ತಿದ್ದರು. ಆದರೆ ಈ AI ಯುಗ ಬಂದಮೇಲೆ ಸಣ್ಣ ಸಣ್ಣ ನಗರಗಳಲ್ಲಿ ಕೂಡ ಯುವಕರು ಮತ್ತು ಮಹಿಳೆಯರು ಸ್ಟಾರ್ಟಪ್ ಕಂಪನಿಗಳನ್ನು ತೆರೆಯಲು ಆರಂಭಿಸಿದ್ದಾರೆ. ಇದರಿಂದ ತಮ್ಮ ತಮ್ಮ ಪ್ರದೇಶದಲ್ಲೇ ನಿರುದ್ಯೋಗಿಗಳಿಗೆ ಕೆಲಸದ ಅವಕಾಶ ಸಿಗುತ್ತಿದೆ. ತಾವು ಹುಟ್ಟಿ ಬೆಳೆದಿರುವಂತಹ ನಗರಗಳಲ್ಲೇ ದಿನನಿತ್ಯ ಕೆಲಸ ಮಾಡುತ್ತಾ ಆರಾಮದಾಯಕ ಜೀವನ ನಡೆಸಲು ಸಾಧ್ಯವಾಗುತ್ತಿದೆ.

AI ಮಾತ್ರವಲ್ಲ ಗ್ರೀನ್ ಟೆಕ್ ಕೂಡ ಪ್ರಗತಿಯಲ್ಲಿದೆ

ದೇಶದ ಕೆಲವು ಉದ್ಯಮಿಗಳು ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ನಮ್ಮ ಸುತ್ತಲಿನ ಪರಿಸರದ ಸಂರಕ್ಷಣೆಗೆ ಉಪಯೋಗವಾಗುವ ಸ್ಟಾರ್ಟಪ್‌ಗಳನ್ನು ತೆರೆಯುತ್ತಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಕಾರ್ಬನ್ ಮುಕ್ತಗೊಳಿಸುವ ಸ್ಟಾರ್ಟಪ್‌ಗಳು ಕೂಡ ಪ್ರಾರಂಭವಾಗಿವೆ.. ಗ್ರೀನ್ ಟೆಕ್ ಇಂದಾಗಿ ಗ್ರೀನ್ ಹೈಡ್ರೋಜನ್ ಮತ್ತು ಕ್ಲೀನ್ ಎನರ್ಜಿ (ಶುದ್ಧ ಇಂಧನ) ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ.

ಜಾಗತಿಕ ಮಾರುಕಟ್ಟೆಯತ್ತ ಭಾರತೀಯ ಸ್ಟಾರ್ಟಪ್‌ಗಳು

ನಮ್ಮ ದೇಶದಲ್ಲಿ ಸ್ಟಾರ್ಟಪ್ ಕಂಪನಿಗಳು ಶುರುವಾಗಿ ಜನರಿಗೆ ಉದ್ಯೋಗ ಸಿಗುವುದರ ಜೊತೆಗೆ, ಬೇರೆ ದೇಶದ ಜನರು ನಮ್ಮ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಸೆಳೆಯುವ ಮಟ್ಟಿಗೆ ಅಭಿವೃದ್ಧಿ ಹೊಂದುತ್ತಿವೆ. ಪ್ರಮುಖವಾಗಿ ಅಮೇರಿಕ, ಯುರೋಪ್ ಮುಂತಾದ ಜಾಗತಿಕ ದೇಶಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸ್ಟಾರ್ಟಪ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಭಾರತ-ಫ್ರಾನ್ಸ್ ಸ್ಟಾರ್ಟಪ್ ಸಹಭಾಗಿತ್ವ

ಇತ್ತೀಚೆಗೆ ನಡೆದ “Bharat Innovates 2026” ಕಾರ್ಯಕ್ರಮದಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ ನಡೆದ ಸ್ಟಾರ್ಟಪ್ ಹಾಗೂ ನವೋದ್ಯಮ ಕ್ಷೇತ್ರದ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಭಾರತೀಯ ಸ್ಟಾರ್ಟಪ್‌ಗಳಿಗೆ ಜಾಗತಿಕ ಮಾರುಕಟ್ಟೆಯನ್ನು ತಲುಪುವ ಅವಕಾಶ ಇನ್ನು ಹೆಚ್ಚಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲೂ ಸ್ಟಾರ್ಟಪ್ ಕ್ರಾಂತಿ

​ಬೆಂಗಳೂರಿನ SatSure ಸಂಸ್ಥೆಗೆ AI ಆಧಾರಿತ ಭೂಮಿಯ ವೀಕ್ಷಣಾ ತಂತ್ರಜ್ಞಾನ ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಅನುದಾನ ದೊರೆತಿದೆ. ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸ್ಟಾರ್ಟಪ್‌ಗಳು ಎಷ್ಟು ವೇಗವಾಗಿ ಬೆಳೆಯುತ್ತಿವೆ ಎಂಬುದಕ್ಕೆ ಇದೇ ಸ್ಪಷ್ಟ ಸಾಕ್ಷಿಯಾಗಿದೆ.

ಭಾರತ ಸ್ಟಾಟರ್ಪ್ ಕಂಪನಿಗಳು ಕೇವಲ ಲಾಭಕ್ಕೆ ಮಾತ್ರ ಮೀಸಲಾಗಿಲ್ಲ ಸಣ್ಣ ಸಣ್ಣ ನಗರಗಳಲ್ಲಿ ಇರುವಂತ ಜನರಿಗೆ ದೇಶದಲ್ಲಾಗುವ ಸಮಸ್ಯೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಸಿಗುವಂತಹ ಕಾರ್ಯ ನಿರ್ವಹಿಸುತ್ತದೆ ಹಾಗೂ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತಹ ಅಭಿವೃದ್ಧಿ ಸಿದ್ದವಾಗುತ್ತಿದೆ ಮುಂದಿನ ದಿನಗಳಲ್ಲಿ ಭಾರತೀಯ ಸ್ಟಾಟರ್ಪ್ ಕಂಪನಿಗಳು ವಿಶ್ವ ಮಟ್ಟದ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ…

Comments

Leave a Reply

Your email address will not be published. Required fields are marked *