ಮಕ್ಕಳನ್ನು ರಕ್ಷಿಸುವುದು ಮತ್ತು ಅವರ ಹಕ್ಕುಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ . ಪ್ರಮುಖವಾಗಿ ಮಕ್ಕಳು ಅತೀ ಹೆಚ್ಚು ಇರುವ ಸ್ಥಳ ಶಾಲಾ ಕಾಲೇಜುಗಳಗಿರುತ್ತವೆ ಆದರಿಂದ ಸಂಪೂರ್ಣ ಜವಾಬ್ದಾರಿ ಆ ಶಾಲೆಯ ಮತ್ತು ಕಾಲೇಜಿನ ಸಂಸ್ಥೆ ವಹಿಸಬೇಕು ಭಾರತದ ಪರಮೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಮಕ್ಕಳ ಮೇಲೆ ದಿನೇ ದಿನೇ ನೆಡೆಯುವಂತಹ ಅತ್ಯಾಚಾರ ಹಾಗೂ ಕಿರುಕುಳಗಳಿಗೆ ಅತ್ಯಂತ ಪ್ರಬಲವಾದ ತೀರ್ಪು ಕೊಟ್ಟಿದೆ

ಮಗುವಿನ ಮೇಲೆ ಲೈಂಗಿಕ ಅತ್ಯಾಚಾರ ನೆಡೆದಿರುವುದು ಶಿಕ್ಷಕರರಿಗೆ ಗೊತ್ತಿದ್ದರು ಸಹ ತಾವೇ ಖುದ್ದಾಗಿ ಪರಿಶೀಲನೆ ನೆಡೆಸಿ ಯಾರಿಗೂ ಹೇಳದೆ ಅದರಲ್ಲಿ ಪೊಲೀಸರಿಗೆ ಹೇಳದೆ ತಾವೇ ಪರಿಶೀಲನೆ ಮಾಡಿ ಮಗುವಿನ ಮೇಲೆ ಹಾಗಿರುವಂತ ಅತ್ಯಾಚಾರವನ್ನು ಮುಚ್ಚಿಟ್ಟಿದ್ದಾರೆ

ಕಾನೂನಿನ ದೃಷ್ಟಿಗೆ ಕಾಣದಂತೆ ಮುಚ್ಚಿಟ್ಟಿರುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಈ ತೀರ್ಪು ದೇಶದ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಮತ್ತು ಜವಾಬ್ದಾರಿಯುತ ನಾಗರಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದೆ

ಪ್ರಕರಣದ ಹಿಂದಿನ ರಹಸ್ಯೆ?

ಪ್ರಕರಣದ ಹಿಂದಿನ ರಹಸ್ಯೆ?case against school principal

​ಈ ಒಂದು ಸತ್ಯಂಶ ಬೆಳಕಿಗೆ ಬಂದಿದ್ದು ಹೇಗೆ? ಈ ಘಟನೆಯು ಶಿಕ್ಷಕರಿಂದ ಕಂಡು ಹಿಡಿಯದೆ ವಿಫಲವಾದಾಗ ಅವರ ಪೋಷಕರು ಪೊಲೀಸರಿಗೆ ದೂರು ಕೊಟ್ಟು ಪ್ರಕಾರಣವನ್ನು ಪ್ರಾರಂಭಿಸುತ್ತಾರೆ ಶಾಲೆಯೊಂದರಲ್ಲಿ ಓದುತ್ತಿದ್ದ ಕೇವಲ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಶಾಲೆಯ 8ನೇ ತರಗತಿಯಲ್ಲಿದ್ದ 16 ವರ್ಷದ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಗಂಭೀರ ಆರೋಪ ಕೇಳಿಬಂದಿತ್ತು.

ಘಟನೆಯಿಂದ ಗಾಬರಿಯಾದ ಬಾಲಕಿ ಈ ವಿಷಯವನ್ನು ಮೊದಲು ತನ್ನ ಅಕ್ಕ, ಸ್ನೇಹಿತೆ ಹಾಗೂ ಶಾಲೆಯ ಹೆಡ್ ಗರ್ಲ್ ಗಮನಕ್ಕೆ ತಂದಿದ್ದಳು. ಅದಾದ ನಂತರ ಈ ಗಂಭೀರ ವಿಷಯವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಲಿಂಡಾ ಸೆಮಾ ಅವರ ಬಳಿ ಹೇಳಲಾಯಿತು .

ಆದರೆ ಈ ಸಮಯದಲ್ಲಿ ಮುಖ್ಯೋಪಾಧ್ಯಾಯಿನಿ ತೆಗೆದುಕೊಂಡ ನಿರ್ಧಾರ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಮಗುವಿನಿಂದ ಇಂತಹ ಸೂಕ್ಷ್ಮ ದೂರು ಬಂದಾಗ ತಕ್ಷಣವೇ ಪೊಲೀಸರಿಗೆ ಅಥವಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕಾಗಿದ್ದು ಕಾನೂನುಬದ್ಧ ನಿಯಮವಾಗಿದೆ.

ಆದರೆ ಮುಖ್ಯೋಪಾಧ್ಯಾಯಿನಿ ಆ ನಿಯಮವನ್ನು ಲೆಕ್ಕಿಸದೆ ಅವರು ಪೊಲೀಸರಿಗೆ ಮಾಹಿತಿ ನೀಡದೆ ತಮ್ಮದೇಯಾದ ಶೈಲಿಯಲ್ಲಿ ಕಾರ್ಯಾಚರಣೆ ಮಾಡಲು ಮುಂದಾದರು. ಬಾಲಕಿಯ ಖಾಸಗಿ ಅಂಗಗಳನ್ನು ತಾವೇ ಸ್ವತಃ ಪರೀಕ್ಷಿಸಿ ಯಾವುದೇ ರೀತಿಯ ಗಾಯಗಳಿಲ್ಲದ ಕಾರಣಕ್ಕೆ ಬಾಲಕಿಯ ದೂರನ್ನು ಸುಳ್ಳು ಎಂದು ತೀರ್ಮಾನಿಸಿ ತಿರಸ್ಕರಿಸಿದರು. ಈ ಕಾರಣದಿಂದಾಗಿ ಅವರು ಪೊಲೀಸರಿಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ನೀಡಲಿಲ್ಲ.

ಕೆಲವು ತಿಂಗಳುಗಳ ನಂತರ ಮಗುವಿನ ಪೋಷಕರಿಗೆ ಈ ಘಟನೆಯ ಅರಿವಿಗೆ ಬಂದು ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದರು. ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.

ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ಅದರಲ್ಲಿದ್ದ ದೋಷಗಳು?

ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ಅದರಲ್ಲಿದ್ದ ದೋಷಗಳು

ಪೊಲೀಸರು ತನಿಖೆ ನಡೆಸಿ ಮುಖ್ಯೋಪಾಧ್ಯಾಯಿನಿ ವಿರುದ್ಧ ಕಾನೂನು ಭಾಹಿರ ಪಟ್ಟಿ ಸಲ್ಲಿಸಿದ ನಂತರ, ಅವರು ತಮಗೆ ನೀಡಲಾಗಿದ್ದ ಕಾನೂನು ರಕ್ಷಣೆಯನ್ನು ಪ್ರಶ್ನಿಸಿ ಗೌಹತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗೌಹತಿ ಹೈಕೋರ್ಟ್, ಮುಖ್ಯೋಪಾಧ್ಯಾಯಿನಿ ಮೇಲಿದ್ದ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಹೈಕೋರ್ಟ್ನೀ ಮುಖ್ಯೋಪಾಧ್ಯಾಯಿನಿಗೆ ದೌರ್ಜನ್ಯ ನಡೆದಿರುವ ಬಗ್ಗೆ ಯಾವುದೇ ವೈಯಕ್ತಿಕ ಜ್ಞಾನ ಇರಲಿಲ್ಲ.

ಮಗು ಹೇಳಿದ್ದನ್ನು ಕೇಳಿ ಅವರು ತಾವೇ ಸ್ವತಃ ದೈಹಿಕ ಪರೀಕ್ಷೆ ನಡೆಸಿದಾಗ ಅವರಿಗೆ ದೌರ್ಜನ್ಯದ ಯಾವುದೇ ಮೇಲ್ನೋಟದ ಲಕ್ಷಣಗಳು ಕಂಡುಬಂದಿರಲಿಲ್ಲ. ಹಾಗಾಗಿ ಅವರು ಉದ್ದೇಶಪೂರ್ವಕವಾಗಿ ಅಪರಾಧವನ್ನು ಮುಚ್ಚಿಟ್ಟಿದ್ದಾರೆ ಅಥವಾ ಪೊಲೀಸರಿಗೆ ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಿದ್ದಾರೆ ಎನ್ನಲು ಬರುವುದಿಲ್ಲ. ಹೈಕೋರ್ಟ್‌ನ ಈ ಆದೇಶವು ಅತ್ಯಂತ ಗಂಭೀರ ಲೋಪದಿಂದ ಕೂಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು ಮತ್ತು ಕಾನೂನು ವಿಶ್ಲೇಷಣೆ

ಜಸ್ಟಿಸ್ ಮನೋಜ್… ಮಿಶ್ರಾ ಮತ್ತು ಜಸ್ಟಿಸ್ ಕೆ.ವಿ. ವಿಶ್ವನಾಥನ್ ಅವರಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಗೌಹತಿ ಹೈಕೋರ್ಟ್‌ನ ಆದೇಶವನ್ನು ಸಂಪೂರ್ಣವಾಗಿ ಬದಿಗೆ ಸರಿಸಿತು. ಮುಖ್ಯೋಪಾಧ್ಯಾಯಿನಿ ವಿರುದ್ಧದ ಪೋಕ್ಸೋ ಪ್ರಕರಣವನ್ನು ಮರುಜೀವಗೊಳಿಸಿದ ನ್ಯಾಯಾಲಯವು, ಕಾನೂನಿನ ಪ್ರಮುಖ ಅಂಶಗಳನ್ನು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಿತು

  • ಮಾಹಿತಿ ಅಥವಾ ಜ್ಞಾನ’ ಎಂದರೆ ಏನು?: ಪೋಕ್ಸೋ ಕಾಯ್ದೆಯ ಸೆಕ್ಷನ್ 16ರ ಅಡಿಯಲ್ಲಿ ದೌರ್ಜನ್ಯದ ಜ್ಞಾನ ಅಥವಾ ಮಾಹಿತಿ ಇರುವುದು ಎಂದರೆ ಕೇವಲ ಕಣ್ಣಾರೆ ಅಪರಾಧವನ್ನು ಕಂಡಿರುವುದು ಮಾತ್ರವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಎಂಟು ವರ್ಷದ ಚಿಕ್ಕ ಮಗುವೊಂದು ತನಗೆ ಲೈಂಗಿಕ ತೊಂದರೆಯಾಗಿದೆ ಎಂದು ಶಾಲೆಯ ಜವಾಬ್ದಾರಿಯುತ ಮುಖ್ಯಸ್ಥರ ಬಳಿ ಬಂದು ಹೇಳಿದ ಕ್ಷಣವೇ ಆ ಕೇಳಿಸಿಕೊಂಡ ವ್ಯಕ್ತಿಗೆ ಕಾನೂನಿನ ಪ್ರಕಾರ ಆ ಅಪರಾಧದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದೇ ಅರ್ಥೈಸಬೇಕಾಗುತ್ತದೆ. ಅದನ್ನು ಬಿಟ್ಟು ವೈಯಕ್ತಿಕವಾಗಿ ಸಾಕ್ಷಿ ಇರಲಿಲ್ಲ ಎಂಬ ನೆಪ ಹೇಳಲು ಬರುವುದಿಲ್ಲ.​
  • ವೈದ್ಯಕೀಯ ತಪಾಸಣೆಯ ಅಧಿಕಾರ ಶಾಲೆಯದ್ದಲ್ಲ: ಮುಖ್ಯೋಪಾಧ್ಯಾಯಿನಿ ತಾವೇ ಸ್ವತಃ ಮಗುವಿನ ಖಾಸಗಿ ಅಂಗಗಳನ್ನು ಪರೀಕ್ಷಿಸಿ ನಿರ್ಧಾರಕ್ಕೆ ಬಂದಿದ್ದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಲೈಂಗಿಕ ದೌರ್ಜನ್ಯ ನಡೆದಿದೆಯೇ ಇಲ್ಲವೇ ಎಂಬುದನ್ನು ವೈದ್ಯಕೀಯವಾಗಿ ತಪಾಸಣೆ ನಡೆಸಿ ಪ್ರಮಾಣೀಕರಿಸಲು ಕೇವಲ ನೋಂದಾಯಿತ ಅರ್ಹ ವೈದ್ಯರಿಗೆ ಮಾತ್ರ ಕಾನೂನಿನಲ್ಲಿ ಹಕ್ಕಿದೆ. ಶಾಲೆಯ ಶಿಕ್ಷಕರಾಗಲಿ ಅಥವಾ ಪ್ರಾಂಶುಪಾಲರಾಗಲಿ ಇಂತಹ ತಪಾಸಣೆ ನಡೆಸುವುದು ಕೇವಲ ಕಾನೂನುಬಾಹಿರ ಮಾತ್ರವಲ್ಲ, ಅದು ಮಗುವಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ನಡವಳಿಕೆಯಾಗಿದೆ.
  • ತಕ್ಷಣದ ವರದಿ ಕಡ್ಡಾಯ ಕರ್ತವ್ಯ: ಪೋಕ್ಸೋ ಕಾಯ್ದೆಯ ಪ್ರಕಾರ, ಮಗುವಿನಿಂದ ದೂರು ಬಂದ ತಕ್ಷಣವೇ ಅದನ್ನು ಜುವೆನೈಲ್ ಪೊಲೀಸ್ ಘಟಕಕ್ಕೆ ಅಥವಾ ಸ್ಥಳೀಯ ಪೊಲೀಸರಿಗೆ ಲಿಖಿತವಾಗಿ ಅಥವಾ ಮೌಖಿಕವಾಗಿ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಮತ್ತು ಮುಖ್ಯವಾಗಿ ಸಾಂಸ್ಥಿಕ ಮುಖ್ಯಸ್ಥರ ಕಾನೂನುಬದ್ಧ ಕಡ್ಡಾಯ ಕರ್ತವ್ಯವಾಗಿದೆ. ಅದನ್ನು ಪರಿಶೀಲಿಸುವ, ತನಿಖೆ ಮಾಡುವ ಅಥವಾ ರಾಜಿ ಮಾಡುವ ಯಾವುದೇ ಅಧಿಕಾರ ಯಾರಿಗೂ ಇಲ್ಲ.
  • Vietnam Boat Accident: ವಿಯೆಟ್ನಾಂನಲ್ಲಿ ಮುಳುಗಿದ ಹೈ ಸ್ಪೀಡ್ ಬೋಟ್ 15 ಭಾರತೀಯರ ಸಾವು

ಕಾನೂನಿನ ಅಡಿಯಲ್ಲಿ ಇರುವ ಶಿಕ್ಷೆಯ ಪ್ರಮಾಣ

ಪೋಕ್ಸೋ. ಕಾಯ್ದೆಯ ಸೆಕ್ಷನ್ 21 ರ ಪ್ರಕಾರ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ಮಾಹಿತಿ ಇದ್ದೂ ಅದನ್ನು ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲು ವಿಫಲರಾಗುವ ಅಥವಾ ಉದ್ದೇಶಪೂರ್ವಕವಾಗಿ ಮುಚ್ಚಿಡುವ ಯಾವುದೇ ವ್ಯಕ್ತಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಇವೆರಡನ್ನೂ ಒಟ್ಟಿಗೆ ವಿಧಿಸಲು ಕಾನೂನಿನಲ್ಲಿ ನೇರ ಅವಕಾಶವಿದೆ.

ಈ ಪ್ರಕರಣದಲ್ಲಿ ಶಾಲೆಯ ಹೆಡ್ ಗರ್ಲ್ ಹಾಗೂ ಸಂತ್ರಸ್ತೆಯ ಸ್ನೇಹಿತೆ ಅಪ್ರಾಪ್ತರಾಗಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ. ಆದರೆ ವಯಸ್ಕರಾದ ಮತ್ತು ಶಾಲೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮುಖ್ಯೋಪಾಧ್ಯಾಯಿನಿ ಇಂತಹ ಕಟ್ಟುನಿಟ್ಟಿನ ಕಾನೂನಿನಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಈ ತೀರ್ಪಿನ ದೂರುಗಳು ಪರಿಣಾಮಗಳು ಮತ್ತು ಸಂದೇಶ

ಸುಪ್ರೀಂ ಕೋರ್ಟ್‌ನ ಈ ತೀರ್ಪು ಭಾರತದಾದ್ಯಂತ ಇರುವ ಎಲ್ಲಾ ಶಾಲಾ-ಕಾಲೇಜುಗಳು, ವಿದ್ಯಾರ್ಥಿನಿಲಯಗಳು ಮತ್ತು ಮಕ್ಕಳ ಪಾಲನಾ ಕೇಂದ್ರಗಳಿಗೆ ಅತ್ಯಂತ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ

  • ಸಾಂಸ್ಥಿಕ ರಕ್ಷಣೆ ತಂತ್ರಗಳಿಗೆ ಬ್ರೇಕ್: ಸಾಮಾನ್ಯವಾಗಿ ಅನೇಕ ಪ್ರತಿಷ್ಠಿತ ಶಾಲೆಗಳು ತಮ್ಮ ಸಂಸ್ಥೆಯ ಹೆಸರು ಕೆಡುತ್ತದೆ ಎಂಬ ಸಾಮಾಜಿಕ ಭಯದಿಂದ ಅಥವಾ ಆರೋಪಿಗಳು ಪ್ರಭಾವಿ ಕುಟುಂಬದವರಾಗಿದ್ದರೆ ಇಂತಹ ಪ್ರಕರಣಗಳನ್ನು ಶಾಲೆಯ ಒಳಗಡೆಯೇ ಸಂಧಾನದ ಮೂಲಕ ಮುಚ್ಚಿಹಾಕಲು ಪ್ರಯತ್ನಿಸುತ್ತವೆ. ಆದರೆ ಈಗ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಇಂತಹ ಪ್ರಯತ್ನಗಳು ನೇರವಾಗಿ ಜೈಲು ಶಿಕ್ಷೆಗೆ ದಾರಿ ಮಾಡಿಕೊಡುತ್ತವೆ.​
  • ಮಕ್ಕಳ ದೂರಿಗೆ ಪರಮೋಚ್ಚ ಮಾನ್ಯತೆ: ಮಕ್ಕಳು ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಅಥವಾ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಕರು ನಿರ್ಲಕ್ಷಿಸುವಂತಿಲ್ಲ ಮಗು ಯಾವುದೇ ಸಣ್ಣ ಸುಳಿವು ನೀಡಿದರೂ ತಕ್ಷಣ ಕಾರ್ಯಪ್ರವೃತ್ತರಾಗಬೇಕು.​
  • ಬಾಲಾಪರಾಧಿಗಳಿಗೂ ವಿನಾಯಿತಿ ಇಲ್ಲ: ಈ ಪ್ರಕರಣದಲ್ಲಿ ಆರೋಪಿ ವಿದ್ಯಾರ್ಥಿ ಅಪ್ರಾಪ್ತನಾಗಿದ್ದರೂ ಸಹ ಆತನ ವಿರುದ್ಧ ಜುವೆನೈಲ್ ಜಸ್ಟಿಸ್ ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿ ಚಿಕ್ಕವನೆಂಬ ಕಾರಣಕ್ಕೆ ಶಾಲೆಯು ದೂರನ್ನು ಮುಚ್ಚಿಡುವಂತಿಲ್ಲ.

​ಮುಖ್ಯ ಸಂದೇಶ ಮತ್ತು ಎಚ್ಚರಿಕೆ:

Oplus_16908288

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೂರುಗಳು ಬಂದಾಗ ಶಾಲೆಗಳು ತಮ್ಮ ಗೌರವ ಉಳಿಸಿಕೊಳ್ಳಲು ಅಥವಾ ಸ್ವಂತ ತೀರ್ಮಾನ ಕೈಗೊಳ್ಳಲು ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಮಗು ದೂರು ನೀಡಿದ ತಕ್ಷಣ ಯಾವುದೇ ವಿಳಂಬವಿಲ್ಲದೆ ಪೊಲೀಸರಿಗೆ ವರದಿ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕ ಹಾಗೂ ಸಾಂಸ್ಥಿಕ ಮುಖ್ಯಸ್ಥರ ಕಡ್ಡಾಯ ಕರ್ತವ್ಯವಾಗಿದೆ.

ದೂರು ನಿಜವೇ ಅಥವಾ ಸುಳ್ಳೇ ಎಂದು ನಿರ್ಧರಿಸುವ ಅಧಿಕಾರ ಕೇವಲ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಕ್ಕೆ ಮಾತ್ರ ಇದೆ. ಇದನ್ನು ಉಲ್ಲಂಘಿಸಿ ಮಾಹಿತಿ ಮುಚ್ಚಿಟ್ಟರೆ ಪೋಕ್ಸೋ ಕಾಯ್ದೆಯ ಸೆಕ್ಷನ್ 21ರ ಅಡಿಯಲ್ಲಿ 6 ತಿಂಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಈಗ ಈ ಪ್ರಕರಣದ ವಿಚಾರಣೆಯನ್ನು ಮರುಜೀವಗೊಳಿಸಿದ್ದು, ವಿಚಾರಣಾ ನ್ಯಾಯಾಲಯವು ಕಾನೂನಿನ ಪ್ರಕಾರ ಮುಖ್ಯೋಪಾಧ್ಯಾಯಿನಿ ಲಿಂಡಾ ಸೆಮಾ ಅವರ ವಿರುದ್ಧದ ಕೇಸನ್ನು ಮುಂದುವರಿಸಲಿದೆ.

ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ. ಶಾಲೆಗಳು ಕೇವಲ ಅಕ್ಷರ ಕಲಿಸುವ ಕೇಂದ್ರಗಳಾಗದೆ, ಮಕ್ಕಳ ಪಾಲಿಗೆ ಅತ್ಯಂತ ಸುರಕ್ಷಿತವಾದ ಆಶ್ರಯ ತಾಣಗಳಾಗಬೇಕು ಎಂಬುದೇ ಈ ಐತಿಹಾಸಿಕ ತೀರ್ಪಿನ ಆಶಯವಾಗಿದೆ.

Leave a Reply

Your email address will not be published. Required fields are marked *